ತಾಲೂಕಿನ ವಿವಿದೆಡೆಗಳಲ್ಲಿ ಕಾಡಾನೆಗಳ ದಾಳಿ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ರಿಗೆ ರಕ್ಷಿತ್ ಶಿವರಾಂ ರಿಂದ ಮನವಿ

0

ಬೆಳ್ತಂಗಡಿ: ತಾಲೂಕಿನ ವಿವಿದೆಡೆಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಕೃಷಿ ನಾಶ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿ ಸಲ್ಲಿಸಿದರು.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಶಿಬಾಜೆ, ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಚಾರ್ಮಾಡಿ, ನೆರಿಯ, ಪುದೆವೆಟ್ಟು ಗ್ರಾಮಗಳ ರೈತರು ಕಾಡಾನೆ ಧಾಳಿಯಿಂದ ಲಕ್ಷಾಂತರ ರೂಪಾಯಿಯ ಕೃಷಿ ನಷ್ಟ ಅನುಭವಿಸಿದ್ದಾರೆ.ಕಾಡಾನೆಗಳ ಉಪಟಳದಿಂದಾಗಿ ಸಂಜೆಯ ನಂತರ ಮನೆಯಿಂದ ಹೊರಗೆ ಬರದಂತಾಗಿದೆ.ಕಾಡಾನೆಗಳನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆಗೆ ಸರ್ಕಾರ ನಿರ್ದೇಶನ ನೀಡಬೇಕು. ಮತ್ತು ಆ್ಯಂಟಿ ಡಿಪ್ರೆಡೇಷನ್ ಕ್ಯಾಂಪ್ (Anti depredation camp)ನ್ನು ತುರ್ತಾಗಿ ರಚಿಸಿ ಸಿಬ್ಬಂದಿಯನ್ನು ನೇಮಕ ಮಾಡಿ ಗಸ್ತು ತಿರುಗಲು ವಾಹನದ ವ್ಯವಸ್ಥೆಯನ್ನು ಮಾಡಬೇಕೆಂದು ಸಚಿವರಿಗೆ ರಕ್ಷಿತ್ ಶಿವರಾಂ ರವರು ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here