ಬೆಳ್ತಂಗಡಿ: ಸ.ಪ್ರ.ದ ಕಾಲೇಜಿನಲ್ಲಿ ಸಾಕ್ಷ್ಯ ಚಿತ್ರ ನಟನಾ ತರಬೇತಿ ಕಾರ್ಯಕ್ರಮ

0

ಬೆಳ್ತಂಗಡಿ: ಸ.ಪ್ರ.ದ ಕಾಲೇಜು, ಬೆಳ್ತಂಗಡಿಯ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಯೂ ಪ್ಲಸ್ ಚಾನೆಲ್ ಉಜಿರೆ ಇವರ ಸಹಯೋಗದೊಂದಿಗೆ ಸಾಕ್ಷ್ಯ ಚಿತ್ರ ನಟನಾ ತರಬೇತಿ ಕಾರ್ಯಕ್ರಮವನ್ನು ಸೆ.೨೦ರಂದು ಆಯೋಜಿಸಲಾಗಿತ್ತು.ಶ್ರೀ ಕುಮಾರೇಶ್ ಪ್ರೋಗ್ರಾಮ್ ಪ್ರೊಡ್ಯೂಸರ್ ಯೂ ಪ್ಲಸ್ ಚಾನೆಲ್ ಇವರು ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಡಾ. ಆಂಟನಿ ಟಿ.ಪಿ, ನಿವೃತ್ತ ಪ್ರಾಂಶುಪಾಲರು ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಘವ.ಎನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯಾ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here