ಉಪ್ಪಿನಂಗಡಿ: ಉಪ್ಪಿನಂಗಡಿ ಪೆದಮಲೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ವಸತಿ ಸಮುಚ್ಛಯ ಅನ್ನಪೂರ್ಣ ರೆಸಿಡೆನ್ಸಿ ಸೆ.21 ರಂದು ಶುಭಾರಂಭಗೊಂಡಿದೆ.
ಮಂಗಳೂರು ಶಕ್ತಿ ನಗರ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಕೆ.ಸಿ.ನೈಾಕ್ ರವರು ದೀಪ ಪ್ರಜ್ವಲಿಸುವ ಮೂಲಕ ಮಾತನಾಡುತ್ತಾ ಹಸಿವನ್ನು ನೀಗಿಸುವ ಜೊತೆಯಲ್ಲಿ ವಾಸಿಸುವುದಕ್ಕೆ ಆಶ್ರಯ ನೀಡುವ ಕೆಲಸ ಯುವ ಪೀಳಿಗೆಗೆ ಮಾದರಿಯಾಗಿದೆ.ಪ್ರಾಮಾಣಿಕವಾಗಿ ಹೋಟೆಲ್ ಉದ್ಯಮ ವ್ಯವಹಾರದಲ್ಲಿ ಯಶಸ್ಸು ಕಂಡಾಗ ಮಾತ್ರ ಸಮಾಜದ ಹಿತದೃಷ್ಟಿಯಿಂದ ಸ್ಥಾನ ಮಾನ ದೊರೆಯುತ್ತದೆ.ಈ ಕೆಲಸವನ್ನು ಅನ್ನಪೂರ್ಣ ರೆಸಿಡೆನ್ಸಿ ಸಂಸ್ಥೆ ಕುಟುಂಬಸ್ಥರಿಂದ ಆಗಿದೆ ಎಂದು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ಗೌಡ, ಉಪ್ಪಿನಂಗಡಿ ಉದ್ಯಮಿ ಯು.ರಾಮ ಹಾಗೂ ಜಯರಾಮ ನೈಾಕ್ ಅನ್ನಪೂರ್ಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಸಂಜೀವ ಗೌಡ ಮಠಂದೂರು ಕಾರ್ಯಕ್ರಮಕ್ಕೆ ಭೇಟಿ ನೀಡಿದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅನುಪಸ್ಥಿತಿಯಲ್ಲಿ ಬೆಂಗಳೂರಿನಿಂದ ಶುಭ ಹಾರೈಕೆ ಸಂದೇಶ ಕಳಿಸಿಕೊಟ್ಟರು.
ಗುತ್ತಿಗೆದಾರರಾದ ವಸಂತ ಮಜಲು, ರಾಧಾಕೃಷ್ಣ ನಾೈಕ್ ಉಪ್ಪಿನಂಗಡಿ, ಇಳಂತಿಲ ಗ್ರಾಮ ಪಂಚಾಯತ್ ಸದಸ್ಯ ಇಸೂಫ್, ಕೊಂಕಣ್ ರೈಲ್ವೆ ಅಧಿಕಾರಿ ಸತೀಶ್ ಕುಮಾರ್ ಅರ್.ಎನ್, ಸ್ಥಳೀಯರಾದ ಸದಾನಂದ ಸಾಲಿಯನ್ ಪೆದಮಲೆ, ಉಮೇಶ್ ಶೆಣೈ ಉಪ್ಪಿನಂಗಡಿ ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಟ್ಟಡದ ಗುತ್ತಿಗೆದಾರರಾದ ಧರ್ಮರಾಜ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು.
ಸಂಸ್ಥೆಯ ಮಾಲೀಕರಾದ ಹರೀಶ್ ಕೆ.ಸ್ವಾಗತಿಸಿದರು.ಸುರೇಶ್ ಕುಮಾರ್ ಆರ್.ಎನ್.ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ಪಾಲುದಾರರಾದ ಶ್ರೀಮತಿ ಸೌಹಾರ್ದ ಹರೀಶ್ ಕೆ.ಎಸ್. ಧನ್ಯವಾದವಿತ್ತರು.