ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೊಕ್ಕಡ ವಲಯದ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕಡ ದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಕೊಕ್ಕಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ ಗೌಡ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಸಂಪನ್ಮೂಲಗಳ ವ್ಯಕ್ತಿಯಾಗಿ ಡಾ, ಮೋಹನ್ ದಾಸ್ ಗೌಡ ರವರು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾದರೆ ಹೊರಬರಲು ಕಷ್ಟ ಸಾಧ್ಯ, ಗುಟ್ಕಾ ವಿಮಲ್ ಮುಂತಾದ ಹಾನಿಕಾರಕ ವಸ್ತುಗಳಿಂದ ಮಕ್ಕಳು ದೂರ ಇರುವಂತೆ ಹಾಗೂ ಪ್ರತಿಜ್ಞೆ ಮಾಡಿಸುವುದರೊಂದಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ರೈ ಯವರು ವಹಿಕೊಂಡಿದ್ದು ಕಾರ್ಯಕ್ರಮದ ಬಗ್ಗೆ ಶ್ಲಾಘನೇ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಒಕ್ಕೂಟದ ವಲಯಧ್ಯಕ್ಷರು ಶೇಷಪ್ಪ ಮೂಲ್ಯ, ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪ್ರಭಾಕರ್, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ ಜಾನಕಿ, ಸೇವಾಪ್ರತಿನಿಧಿ ಅನಿತಾ ರೋಹಿಣಿ ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕರು ಭಾಗೀರಥಿ ಯವರು ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕರು ಜೋಳಿ ಜೇಕೊಬ್ ಸ್ವಾಗತಿಸಿ, ಉಪನ್ಯಾಸಕರಾದ ಜಲಜ ರವರು ವಂದಿಸಿದರು.