ಮುಂಡತ್ತೋಡಿ ಶ್ರೀ ಯುವಕ ಮಂಡಲದಿಂದ ಶಾಲೆಗೆ ಬೆಲ್ಟ್, ಟೈ, ಐಡಿ ಕೊಡುಗೆ

0

ಉಜಿರೆ: ಇಲ್ಲಿಯ ಮುಂಡತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಂಡತೋಡಿ ಶ್ರೀ ಯುವಕ ಮಂಡಲದ ವತಿಯಿಂದ ಶಾಲಾ ಮಕ್ಕಳಿಗೆ ಬೆಲ್ಟ್, ಟೈ, ಐಡಿ ಕಾರ್ಡ್ ಆ.15 ರಂದು ನೀಡಿದರು.

ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಶಿಕ್ಷಕ ರಮೇಶ್ ವಿ.ಎಸ್ ಮತ್ತು ಶಾಲೆಗೆ ಬಂದಿರುವ ಹೊಸ ಶಿಕ್ಷಕಿಯನ್ನು ಗೌರವಿಸಲಾಯಿತು.

ಶ್ರೀ ಯುವಕ ಮಂಡಲದ ಅಧ್ಯಕ್ಷ ರಜನೀಶ್, ಕಾರ್ಯದರ್ಶಿ ಸುರೇಶ್, ಸಂಚಾಲಕ ಅರ್ಜುನ್, ಗೌರವ ಸಲಹೆಗಾರ ಪ್ರಪುಲ್ ಅಂಚನ್, ಗೌರವ ಮಾರ್ಗದರ್ಶಕ ಗಣೇಶ್ ನಾಯರ್, ಜಿ.ಪ.ಮಾಜಿ ಸದಸ್ಯೆ ಸಿ.ಕೆ. ಚಂದ್ರಕಲಾ, ಶಿಕ್ಷಣ ಇಲಾಖೆಯ ಸಿ ಆರ್.ಪಿ ಪ್ರತಿಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೇವತಿ, ಮುಖ್ಯ ಶಿಕ್ಷಕಿ ಸೇವಂತಿ, ಸಹ ಶಿಕ್ಷಕಿಯರಾದ ಉಷಾ, ಪ್ರಜ್ಞಾ, ರಂಜಿತಾ, ಯುವಕ ಮಂಡಲದ ಸದಸ್ಯರು ಹಾಜಿರಿದ್ದರು.

ಶ್ರೀ ಯುವಕ ಮಂಡಲದ ಕೋಶಾಧಿಕಾರಿ ವೆಂಕಪ್ಪ ವಂದಿಸಿದರು.

LEAVE A REPLY

Please enter your comment!
Please enter your name here