ಉಜಿರೆ: ಶ್ರೀ ಧ.ಮಂ.ಅ.ಸೆಕೆಂಡರಿ ಶಾಲೆಯಲ್ಲಿ ಪೋಷಕರ ಸಭೆ

0

ಉಜಿರೆ: ಶ್ರೀ ಧ. ಮ.ಅ.ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ಜು.28ರಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಶ್ರೀ.ಧ.ಮಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಬಿ.ಸೋಮಶೇಖರ್.ಶೆಟ್ಟಿ ಆಗಮಿಸಿ” ಪಾಲಕರ ಮಾರ್ಗದರ್ಶನವೇ ಮಕ್ಕಳಿಗೆ ದಾರಿದೀಪ,ಮಕ್ಕಳಲ್ಲಿ ಜೀವನ ಕೌಶಲ್ಯವನ್ನು ಬೆಳೆಸಿವುದರ ಮೂಲಕ ಮೌಲ್ಯಯುತ ಬದುಕನ್ನು ಸಾಗಿಸಲು ಕಲಿಸಿ, ಮಕ್ಕಳಿಗೆ ” ಸಾಹಸ ಮತ್ತು ಆತ್ಮವಿಶ್ವಾಸ ಎರಡು ಕಣ್ಣುಗಳಿದ್ದಂತೆ ” ಮಕ್ಕಳಿಗೆ ಪ್ರೀತಿ ಮತ್ತು ಸಮಯ ಕೊಡಿ, ಕಲಿಕಾ ಸಮಯದಲ್ಲಿ ಮಕ್ಕಳ ಮೇಲೆ ಒತ್ತಡವನ್ನು ಹೇರದೆ ಪ್ರೋತ್ಸಾಹಿಸಿ, ಮಕ್ಕಳ ಮೇಲೆ ನಿಗಾವಹಿಸಿ, ಅವರು ಉತ್ತಮ ದಿನಚರಿಯನ್ನು ರೂಢಿಸಿ ಕೊಳ್ಳುವಂತೆ ನೋಡಿಕೊಂಡು ಅವರಿಗೆ ಸಾಧಿಸಲು ಪ್ರೋತ್ಸಾಹ ನೀಡುವ ಜವಾಬ್ದಾರಿ ಪೋಷಕರದ್ದು”.ಎಂದು ಮಾಹಿತಿ ನೀಡಿದರು.

10ನೇ ತರಗತಿಯ ತರಗತಿ ಶಿಕ್ಷಕ ರವೀಶ್ ರವರು ಶಾಲಾ ನಿಯಮಗಳ ಕುರಿತು ಮಾಹಿತಿ ನೀಡಿದರು.ಶಾಲಾ ಮುಖ್ಯೋಪಾಧ್ಯಾಯ ಸುರೇಶ್ .ಕೆ ರವರು ಅಧ್ಯಕ್ಷತೆ ವಹಿಸಿ. ” ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಫ್ಯಾನ್ ನ ಮೂರು ರೇಖೆಗಳಿದ್ದಂತೆ” ಈ ಮೂರು ರೆಕ್ಕೆಗಳು ಸಮರ್ಪಕವಾಗಿ ತಿರುಗಿದರೆ ಮಾತ್ರ “ಕಲಿಕಾ ಪ್ರಗತಿ ಸಾಧ್ಯ” ಎಂದರು.

ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಶಿಕ್ಷಕ ಮೋನಪ್ಪ ರವರು ಸ್ವಾಗತಿಸಿ, ಶಿಕ್ಷಕ ವಿಶ್ವನಾಥ್ ವಂದನಾರ್ಪಣೆಗೈದರು.ಹತ್ತನೆ ತರಗತಿಯ ವಿದ್ಯಾರ್ಥಿಯನಿಯರು ಪ್ರಾರ್ಥನೆ ಮಾಡಿದರು.ಹತ್ತನೇ ತರಗತಿಯ ತರಗತಿ ಶಿಕ್ಷಕಿ ಶ್ರೀಮತಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here