ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ಜರಗಿತು.ಶಾಲೆಯ ಪೋಷಕ ಸುಲೈಮಾನ್ ಭೀಮಂಡೆಯವರ ಗದ್ದೆಯಲ್ಲಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಬೇಸಾಯದ ಪಾಠ ನಡೆಯಿತು.ಆರಂಭದಲ್ಲಿ ಮಕ್ಕಳಿಂದ ನೇಜಿ ನಾಟಿ ಮಾಡುವ ಕಾರ್ಯಕ್ರಮ ಜರಗಿತು.
ಅನಂತರ ಕಬಡ್ಡಿ, ಓಟ, ಹಾಳೆಯಲ್ಲಿ ಮಕ್ಕಳನ್ನು ಕುಳ್ಳಿರಿಸಿ ಎಳೆಯುವ ಓಟ, ತ್ರೋಬಾಲ್, ರಿಲೆ ಮುಂತಾದ ಕ್ರೀಡಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.
ಈ ಮೂಲಕ ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿಗಳು ಬೇಸಾಯದ ಮತ್ತು ಕೆಸರಿನಲ್ಲಿ ಕ್ರೀಡಾ ಗಮ್ಮತ್ತಿನ ಸವಿಯನ್ನು ಸವಿದರು.ಕಾರ್ಯಕ್ರಮದ ನೇತೃತ್ವವನ್ನು ಶಾಲೆಯ ಶಾರೀರಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದರವರು ವಹಿಸಿದ್ದರು.ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಗೌಡ ಕೊಲ್ಲಿಮಾರ್ ರವರು ಅತಿಥಿಯಾಗಿ ಜೊತೆಗಿದ್ದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಶಿಕ್ಷಕರಾದ ಜಗದೀಶ್, ಗಣೇಶ್ವರ್, ಸುಮನ್, ರವಿಚಂದ್ರ ಜೈನ್, ಸುಂದರ ಡಿ. ಕೋಕಿಲಾ, ರಾಜಶ್ರೀ, ಚಿತ್ರಾವತಿ ಮೊದಲಾದವರು ಹಾಜರಿದ್ದರು. ಸುಲೈಮಾನ್ ರವರು ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ ಪಾನೀಯದ ವ್ಯವಸ್ಥೆಯನ್ನು ಮಾಡಿದ್ದರು.