

ಮಡಂತ್ಯಾರು: ಗ್ರಾಮ ಪಂಚಾಯತ್ ನ 2023-24 ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಪ್ರಭರವರ ಅಧ್ಯಕ್ಷತೆಯಲ್ಲಿ ಮಡಂತ್ಯಾರು ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ಜು.3ರಂದು ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾ ಪಿ.ಡಿ ಭಾಗವಹಿಸಿ ಗ್ರಾಮ ಸಭೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾದ್ಯಕ್ಷೆ ಸಂಗೀತ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಶ್ವನಾಥ ಪೂಜಾರಿ, ಶೈಲೇಶ್ ಕುಮಾರ್, ಕಿಶೋರ್ ಶೆಟ್ಟಿ, ಉಮೇಶ್ ಸುವರ್ಣ, ಹರೀಶ್ ಶೆಟ್ಟಿ ಪದೆಂಜೀಲ, ಗೋಪಾಲಕೃಷ್ಣ ಕೆ., ಮೋಹಿನಿ, ರೂಪ, ಅಗ್ನೆಸ್ ಮೋನಿಸ್, ಹನೀಫ್, ಸಾರ ಸನಾಫ್, ಪಾರ್ವತಿ, ರಾಜೀವ, ಶೀಲಾವತಿ ಗ್ರಾಮ ಪಂಚಾಯತ್ ಅಭವೃದ್ಧಿ ಅಧಿಕಾರಿ ಪುರುಷೋತ್ತಮ ಜಿ. , ಕಾರ್ಯದರ್ಶಿ ಕ್ರಿಸ್ಥಿನ್ ಮೋರ್ಲಿನ್ ಡಿಸೋಜಾ ಗ್ರಾಮಸ್ಥರು, ಇಲಾಖಾ ಅಧಿಕಾರಿ, ಸಿಬಂದಿವರ್ಗ, ಆಶಾ ಕಾರ್ಯಕರ್ತೆಯರು , ಆರೋಗ್ಯ ಕಾಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕಳೆದ ಸಭೆಯ ನಡಾವಳಿ, ವಾರ್ಡ್ ಸಭೆಯ ನಡಾವಳಿ, ಜಮಾ ಖರ್ಚಿನ ವಿವರ, ವರದಿ ಕಾರ್ಯದರ್ಶಿ ಕ್ರಿಸ್ಥಿನ್ ಮೊರ್ಲಿನ್ ಡಿಸೋಜಾ, ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಸದಸ್ಯ ಹರೀಶ್ ಶೆಟ್ಟಿ ಸ್ವಾಗತಿಸಿದರು.ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮಸ್ಥರು ಉಪಸ್ಥಿತರಿದ್ದು ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.ಕೃಷಿ ಇಲಾಖೆ ಮತ್ತು ಜಲನಯನ ಇಲಾಖೆ ಮುಖಾಂತರ ನಿರ್ಮಿಸಿದ ಕಿಂಡಿ ಅಣೆಕಟ್ಟುಗಳು ಸರಿಯಾಗಿ ನಿರ್ವಹಣೆ ಮಾಡುವಂತೆ ಗ್ರಾಮಸ್ಥರು ಸಭೆಗೆ ತಿಳಿಸಿದರು.ಮೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಅನೇಕ ಸಮಸ್ಯೆಗಳಿವೆ ಕೂಡಲೆ ಸಮಸ್ಯೆ ಬಗೆ ಹರಿಸುವಂತೆ ಗ್ರಾಮಸ್ಥರ ಆಗ್ರಹ.