





ಮಚ್ಚಿನ: ಗ್ರಾಮದ ಅನಯನಕಾಡು, ಮುಡಿಪಿರೆ, ಕೈಲಾ ಕುರುಡಂಗೆ ಪರಿಸರದಲ್ಲಿ ಚಿರತೆ ತಿರುಗಾಡುತ್ತಿದ್ದು ಜನರು ಭಯಪಡುವಂತಾಗಿದೆ. ಸ್ಥಳೀಯರಾದ ಉದಯ ಅವರು ರಾತ್ರಿ 11ರ ಸಮಯ ಬೈಕಲ್ಲಿ ಸಂಚರಿಸುವ ವೇಳೆ ಅನಯನ ಕಾಡು ರಸ್ತೆಯಲ್ಲಿ ಎದುರು ಬಂದ ಘಟನೆ ನಡೆದಿದೆ. ಮುಡಿಪಿರೆ ಪರಿಸರದಲ್ಲಿ ದಿವಾಕರ ಹಾಗೂ ಇತರರಿಗೂ ಎದುರಾದ ಘಟನೆ ನಡೆದಿದೆ. ಚಿರತೆಯು ತಿರುಗಾಡುತ್ತಿದ್ದು ರಾತ್ರಿ ಹಾಗೂ ಮುಂಜಾನೆಯ ಮೇಲೆ ಜನರ ಎದುರು ಪ್ರತ್ಯಕ್ಷವಾಗುತ್ತಿದ್ದು, ಜನರು ಸಂಚರಿಸಲು ಭಯಪಡುವಂತಾಗಿದೆ. ದಿನನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು ನಡೆದುಕೊಂಡು ಹೋಗುವ ಈ ರಸ್ತೆಯಲ್ಲಿ ಪೊದೆಗಳು ಮುತ್ತಿಕೊಂಡಿದ್ದು ಕಾಡು ಪ್ರಾಣಿಗಳು ಅವಿತಿದ್ದರು ಗೋಚರಿಸದಂತಾಗಿದೆ. ಚಿರತೆಯಿಂದ ದೊಡ್ಡ ಅನಾಹುತ ಆಗುವ ಮುನ್ನ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯವಾಗಿದೆ.
✍️ವರದಿ. ಹರ್ಷ ಬಳ್ಳಮಂಜ









