ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ ನಾಯಕರ ಪ್ರಮಾಣ ವಚನ ಕಾರ್ಯಕ್ರಮ

0

ಮಚ್ಚಿನ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನದ ಶಾಲಾ ಸಂಸತ್ ಪ್ರಮಾಣ ವಚನ ಕಾರ್ಯಕ್ರಮ ಜೂ.30 ರಂದು ಶಾಲೆಯಲ್ಲಿ ನಡೆಯಿತು.ಹಾಗೂ ಶಾಲಾ ಕ್ಲಬ್ ಗಳ ಅನಾವರಣವಾಯಿತು.
ಶಾಲಾ ನಾಯಕ, ನಾಯಕಿ ಹಾಗೂ ಇತರ ಮಂತ್ರಿ ಪದವಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಮಚ್ಚಿನ ಗ್ರಾಮ ಪಂಚಾಯತ್ ಪಿಡಿಒ ಗೌರಿ ಶಂಕರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಜಾಪ್ರಭುತ್ವ ಮತ್ತು ಮತದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಒಲವು ಮೂಡಲು, ಶಾಲಾ ಹಂತದಲ್ಲಿಯೇ ಇಂತಹ ಚಟುವಟಿಕೆಗಳ ಪ್ರಭಾವ ಪರಿಣಾಮಕಾರಿಯಾಗಿದೆ ಎಂದು ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.
ಅಧ್ಯಕ್ಷೆತೆಯನ್ನು ಶಾಲಾ ಪ್ರಾಂಶುಪಾಲೆ ಅಕ್ಷತಾ ಕೆ.ವಹಿಸಿದ್ದರು. ಶಿಕ್ಷಕ ನವೀನ್ ಕುಮಾರ್, ಶಾಲಾ ನಾಯಕ ನಿಶಾಂತ್, ನಾಯಕಿ ಸ್ವಸ್ತಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮಾಣ ವಚನದ ಉಸ್ತುವಾರಿಯನ್ನು ಶಿಕ್ಷಕಿ ಹರಿಣಾಕ್ಷಿ ನಡೆಸಿಕೊಟ್ಟರು.ಶಿಕ್ಷಕಿ ಸುಪ್ರೀತಾ ವಂದಿಸಿ.ಶಿಕ್ಷಕಿ ಸುರೇಖಾ ನಿರೂಪಿಸಿದರು.

LEAVE A REPLY

Please enter your comment!
Please enter your name here