ಕರ್ನಾಟಕ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಶನ್ ವತಿಯಿಂದ ಮಣಿಪುರದಲ್ಲಿ ಶಾಂತಿ ಮರು ಸ್ಥಾಪೀಸಲು ಒತ್ತಾಯಿಸಿ ಸಾರ್ವಜನಿಕ ಪ್ರತಿಭಟನೆ ಮಂಗಳೂರಿನ ಮಿನಿವಿಧಾನ ಸಭಾ ಕಚೇರಿ ಕ್ಲೋಕ್ ಟವರ್ ಬಳಿ ಇಂದು(ಜು.1) ನಡೆಯಿತು.ಮಣಿಪುರದಲ್ಲಿ ಕ್ರೈಸ್ತ ಸಮುದಾಯ ಭಯದ ವಾತಾವಣರದಲ್ಲಿ ಜೀವಿಸುವ ಸ್ಥಿತಿ ಎದುರಾಗಿದೆ. ಕೆಲವರು ನಿರಾಶ್ರಿತ ಕೇಂದ್ರದಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ.
ಅವರ ಸ್ಥಿತಿಯನ್ನು ನೋಡಿದರೆ ಅಲ್ಲಿನ ಆಡಳಿತ ನಡೆಸುವವರೇನು ಮನುಷ್ಯರೋ, ಮೃಗಗಳೋ ಎಂದು ಪ್ರಶ್ನೆ ಮಾಡುವಂತಾಗಿದೆ.
ಇಡೀ ಭಾರತದ ಕ್ರೈಸ್ತ ಸಮುದಾಯ ಮಣಿಪುರದ ಕ್ರೈಸ್ತರ ಜೊತೆಗೆ ನಾವು ಇದ್ದೇವೆ ಎನ್ನುವುದನ್ನು ತೋರಿಸಲು ಈ ಪ್ರತಿಭಟನೆ ಮೂಲಕ ಮುಂದಾಗಿದ್ದೇವೆ ಎಂದು ಪ್ರತಿಭಟನಾಕಾರರು ನುಡಿದರು.
ಮಣಿಪುರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ, ಅಲ್ಲಿನ ಕ್ರೈಸ್ತರಿಗಾಗಿ ಪ್ರಾರ್ಥಿಸಿ, ಹಿಂಸಾಚಾರವನ್ನು ಕೂಡಲೇ ನಿಲ್ಲಿಸಿ ಎಂಬಿತ್ಯಾದಿ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಮಾಜಿ ಶಾಸಕರಾದ ಜೆ.ಆರ್.ಲೋಬೋ ಸೇರಿದಂತೆ ಬೆಳ್ತಂಗಡಿ ಧರ್ಮಪ್ರಾಂತ್ಯಧ ಧರ್ಮಗುರುಗಳು, ಸೀರೋ ಮಲಬಾರ್ ಕ್ಯಾಥಲೋಕ್ ಅಸೋಸಿಯೇಶನ್ ನಿರ್ದೇಶಕರಾದ ವಂದನಿಯ ಶಾಜಿ ಮಾತ್ಯು, ಫಾ.ಮಾಣಿ, ಕೆ ಎಸ್ ಎಂ ಸಿ ಎ ಅಧ್ಯಕ್ಷ ರಾದ ಬಿಟ್ಟಿ ನೆಡುನಿಲಂ, ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ, ಪಿ ಆರ್ ಓ ಸೇಬಾಸ್ಟಿನ್ ಪಿ ಸಿ, ಜೋರ್ಜ್ ಟಿ ವಿ, ಜಿಮ್ಸನ್ ಗುಂಡ್ಯ,ಕಥೋಲಿಕ್ ಯೂನಿಯನ್ ರಾಜ್ಯ ಅಧ್ಯಕ್ಷ ರಾದ ಸೇವಿಯರ್ ಪಾಲೇಲಿ, ಮಾಧ್ಯಮ ವಿಭಾಗ ದ ಫಾ. ಸುನಿಲ್ ತಾಯೆಕಾಟ್ಟಿಲ್ ಸೇರಿದಂತೆ ಹಲವು ಮಂದಿ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ರಾಷ್ಟ್ರ ಪತಿ ಮನವಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಮುಖಾಂತರ ಸಲ್ಲಿಸಲಾಯಿತು.