ಬೆಳ್ತಂಗಡಿ: ಚಾರಣಕ್ಕೆ ಬಂದ ಯುವಕ ಹೃದಯಘಾತದಿಂದ ಸಾವು

0

ಬೆಳ್ತಂಗಡಿ: ನೇತ್ರಾವತಿ ಪೀಕ್ ಪಾಯಿಂಟ್‌ ಗೆ ಟ್ರಕ್ಕಿಂಗ್ ಬಂದಿದ್ದ ಮೈಸೂರು ಮೂಲದ ಪ್ರವಾಸಿ ಯುವಕನೋರ್ವ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಜೂ.30ರಂದು ನಡೆದಿದೆ.

ಮೃತಪಟ್ಟವನನ್ನು ಮೈಸೂರಿನ ರಕ್ಷಿತ್ (27) ಎಂದು ಗುರುತಿಸಲಾಗಿದೆ.ಮೈಸೂರು ಮೂಲದ 7 ಯುವಕರ ಟ್ರಕ್ಕಿಂಗ್‌ಗೆ ಆಗಮಿಸಿದ್ದರು.ಕುದುರೆಮುಖದಿಂದ- ನೇತ್ರಾವತಿ ಪೀಕ್ ಸ್ಪಾಟೆಗೆ ತೆರಳಿದ್ದ ವೇಳೆ ಮಾರ್ಗ ಮಧ್ಯದಲ್ಲಿ ರಕ್ಷಿತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಪೀಕ್ ಸ್ಪಾಟ್ ನಿಂದ ಮೃತದೇಹವನ್ನು ಪೊಲೀಸರು ಕಳಸಕ್ಕೆ ತಂದಿದ್ದಾರೆ.ಬೆಳ್ತಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here