

ಕಳೆಂಜ ಗ್ರಾಮದ ಬರಂಗಾಯ ಕಲ್ಕುಡ ಗುಡ್ಡೆ ಅಣ್ಣಿ ಎಂಬುವವರ ಜೂ.26 ರಂದು ಮನೆಯ ಕೋಳಿ ಗೂಡಿನಲ್ಲಿ ಬೃಹತ್ ಆಕಾರದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಭಯಬೀತಗೊಂಡ ಮನೆಯವರು ತಕ್ಷಣ ಧರ್ಮಸ್ಥಳದ ಉರಗ ಪ್ರೇಮಿ ಸ್ನೇಕ್ ಪ್ರಕಾಶ್ ಇವರನ್ನು ಸಂಪರ್ಕಿಸಿ ಸ್ಥಳಕ್ಕೆ ಆಗಮಿಸಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಹಾವನ್ನು ಉರಗ ಪ್ರೇಮಿ ರಕ್ಷಿಸಿ ಹಿಡಿದು ದೂರದ ಕಾಡಿಗೆ ಬಿಟ್ಟಿರುತ್ತಾರೆ. ಜೊತೆಯಲ್ಲಿ ಸತೀಶ್ ಜೋಡುಸ್ಥಾನ, ಸಹಕರಿಸಿದ್ದಾರೆ.