ಚಾರ್ಮಾಡಿ: ಚಾರ್ಮಾಡಿ ಒಂದನೇ ತಿರುವಿನಿಂದ ಚಾರ್ಮಾಡಿ ಹಳ್ಳದವರೆಗಿನ 3 ಕಿ.ಮೀ. ವ್ಯಾಪ್ತಿಯ ರಸ್ತೆ ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಲಾಗಿದೆ.ಈ 3 ಕಿಮೀ ವ್ಯಾಪ್ತಿಯಲ್ಲಿ ಹಾಕಲಾಗಿರುವ ಡಾಮರು ವಿಪರೀತ ನಯವಾಗಿದ್ದು ಮಳೆಯ ಸಮಯ ಇಲ್ಲಿ ವಾಹನಗಳು ಚಾಲಕರ ಹತೋಟಿಗೆ ಸಿಗದೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಇದರಿಂದ ಮಳೆಗಾಲದಲ್ಲಿ ಅಪಘಾತಗಳು ನಿರಂತರ ನಡೆಯುತ್ತಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ.
ಜೂ.11 ರಂದು ಕೂಡ ಮಳೆ ಸುರಿದಿದ್ದು, ಮಧ್ಯಾಹ್ನ ವೇಳೆ ಉಜಿರೆಯಿಂದ ಚಿಕ್ಕಮಗಳೂರು ಹೋಗುವ ಪಿಕಪ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ವರದಿಯಾಗಿದೆ.
p>