


ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದಲ್ಲಿ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಅವರು ಶಾಲಾ ಆರಂಬೋತ್ಸವವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ, ನೂತನ ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪಾಲಿಗೆ ಆಶಾದಾಯಕವಾದ ವರ್ಷವಾಗಲಿ ಎಂದು ಶುಭ ಹಾರೈಸಿದರು.ಪ್ರೌಢ ಶಾಲೆಗೆ ನೂತನವಾಗಿ ದಾಖಲಿಸಲ್ಪಟ್ಟ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು.
ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಿ ಸ್ವಾಗತಿಸಲಾಯಿತು.ಮುಖ್ಯೋಪಾಧ್ಯಯ ಜಯರಾಮ ಮಯ್ಯರವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳೊಂದಿಗೆ ಶುಭ ಕೋರಿದರು.ಎಲ್ಲಾ ಶಿಕ್ಷಕ ಬಾಂಧವರು ಹಾಗೂ ಶಾಲಾ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ಯುವರಾಜ ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕ ವಿಕಾಸ್ ಆರಿಗ ಧನ್ಯವಾದವಿತ್ತರು.