


ಅಳದಂಗಡಿ: ಜೂ.11ರಂದು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಸತ್ಯದೇವತೆ ದೈವಸ್ಥಾನದ ವತಿಯಿಂದ ಉಚಿತ ಪುಸ್ತಕ ವಿತರಣೆ ನಡೆಯಲಿದೆ. ಮತ್ತು ಬೆಳಿಗ್ಗೆ 9 ಗಂಟೆಗೆ ಹಿಂದು ಯುವಶಕ್ತಿ ಅಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯ ಸಹಕಾರದೊಂದಿಗೆ ಕೆಎಂಸಿ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿರುವುದು. ರೆಡ್ ಕ್ರಾಸ್ ಮಂಗಳೂರು ಸಂಸ್ಥೆಯ ಸಹಕಾರದೊಂದಿಗೆ ಬ್ರಹತ್ ರಕ್ತದಾನ ನಡೆಯಲಿದೆ. ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದಲ್ಲಿ ಗಣ್ಯರ ಸಮಕ್ಷಮದಲ್ಲಿ ಯೋಧರಿಗೆ ಸನ್ಮಾನ ಸಮಾರಂಭ ನಡೆಯಲಿದೆ.