ನೆರಿಯ: ಗಂಡಿಬಾಗಿಲಿನ ಸಂತ ತೋಮಸರ ದೇವಾಲಯ ಹಾಗೂ ಇಲ್ಲಿನ ಧರ್ಮೋಪದೇಶ ಕೇಂದ್ರ ಇದರ ಆಶ್ರಮದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಜಗತ್ತಿಗೆ ಕೇವಲ ಆಧುನಿಕ ಜೀವನವನ್ನು ಹೆಚ್ಚು ಐಷಾರಾಮಿಗೊಳಿಸಲು ಸೀಮಿತಗೊಳಿಸದೇ ಮಾನವ ಮತ್ತು ಪರಿಸರದ ಮಧ್ಯೆ ಸಂತುಲನವನ್ನು ಸ್ಥಾಪೀಸಲು ಸಹ ಒತ್ತು ನೀಡಬೇಕೆಂದು ಗಂಡಿಬಾಗಿಲು ಧರ್ಮೋಪದೇಶ ಕೇಂದ್ರದ ಮುಖ್ಯೋಪಾಧ್ಯಾಯರು ಸಮಾಜ ಸೇವಕರು ಆಗಿರುವ ಶ್ರೀ ಶಿಜು ಸಿ ವಿ ಕರೆ ನೀಡಿದರು.ಕೆ.ಎಸ್.ಎಂ.ಸಿ.ಎ ಕೇಂದ್ರೀಯ ಸಮಿತಿಯ ಪ್ರದಾನ ಕಾರ್ಯದರ್ಶಿ ಸೆಬಾಸ್ಟಿನ್ ಗಿಡ ನೆಟ್ಟು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮೋಪದೇಶ ಕೇಂದ್ರದ ವಂದನಿಯ ಟೊಮಿ ಮಟ್ಟಮ್, ಧರ್ಮ ಗುರುಗಳಾದ ವಂದನಿಯ ಜೋಸ್ ಆಯಾಮ್ ಕುಡಿ, ಮಾಜಿ ಟ್ರಷ್ಟಿ ಶ್ರೀ ಮಾತ್ಯು ಶ್ರೀ ಡೆವಿಸ್,
ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಶ್ರೀ ಸೇಬಾಸ್ಟಿನ್ ಎಂ ಜೆ, ಸಿ.ಎಂ.ಎಲ್ ಅಧ್ಯಕ್ಷ ಆಸ್ಟಿನ್ ಪನಚಿಕ್ಕಲ್ ಹಾಗೂ ಅದ್ಯಾಪಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.