ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಜೂ.03ರಂದು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಸಲಾಯಿತು.

ಸಮಾರಂಭದ ಆರಂಭದಲ್ಲಿ ಶಾಲಾ ನೂತನ ಸಂಚಾಲಕರಾದ ವಂ|ಸ್ವಾ|ಡಾ| ಸ್ಟ್ಯಾನಿ ಗೋವಿಯಸ್ ರವರನ್ನು ಶಾಲಾ ವಾದ್ಯ ವೃಂದದೊಂದಿಗೆ ಬಹಳ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷರಾದ ವಂ|ಸ್ವಾ|ಡಾ| ಸ್ಟ್ಯಾನಿ ಗೋವಿಯಸ್ ರವರು ದೀಪ ಬೆಳಗಿಸುವುದರ ಮೂಲಕ 2023-24ನೇ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿದರು.ನಂತರ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸತತ ಪ್ರಯತ್ನದಿಂದ ಗೆಲುವನ್ನು ಸಾಧಿಸಬಹುದೆಂದು ಹೇಳಿ ಶುಭ ಹಾರೈಸಿದರು.ಇದೇ ಸಮಾರಂಭದಲ್ಲಿ ಶಾಲೆಯಲ್ಲಿ ಸತತ 18 ವರ್ಷ ಸೇವೆಗೈದು, ಸೇವೆಯಿಂದ ಸ್ವಯಂ-ನಿವೃತ್ತಿಯನ್ನು ಹೊಂದಿದ ಸಹ-ಶಿಕ್ಷಕಿ ಶ್ರೀಮತಿ ಐರಿನ್ ಮಾರ್ಟಿಸ್ ರವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ನಿವೃತ್ತಿ ಜೀವನಕ್ಕೆ ಶುಭ ಕೋರಲಾಯಿತು.

2022-23ನೇ ಶೈಕ್ಷಣಿಕ ಸಾಲಿನ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತ್ಯುನ್ನತ ಅಂಕವನ್ನು ಗಳಿಸಿದ ಆನ್ವಿಕ್ ಸೇರಾವೋ, ಎರಲ್ ಸಾಮಿಯ ಡಯಾಸ್, ಅಲಿಶಾ ಫೆರ್ನಾಂಡಿಸ್, ಜೆನಿಶಾ ಸೇರಾ, ಅನ್ವಿ ಎಮ್ ಹಾಗೂ ಪವನ್ ರವರನ್ನು ಅವರ ಹೆತ್ತವರೊಂದಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.

ಶಾಲೆಗೆ ಹೊಸದಾಗಿ ನೇಮಕಗೊಂಡ ಶಿಕ್ಷಕಿಯರನ್ನು ಹಾಗೂ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಸಭೆಗೆ ಪರಿಚಯಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ| ದೀಪಕ್ ಲಿಯೊ ಡೇಸರವರು ವಿದ್ಯಾರ್ಥಿಗಳಿಗೆ ಶಾಲಾ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ವಲೇರಿಯನ್ ಸೇರಾ ಹಾಗೂ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಮೊರಾಸ್ ರವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.ಸಹ ಶಿಕ್ಷಕಿ ಶುಭ್ರ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕಿ ಐಡಾರವರು ಸ್ವಾಗತಿಸಿ, ಶಿಕ್ಷಕಿ ರಮ್ಯಲತಾ ರವರು ವಂದಿಸಿದರು.ನಂತರ ಎಲ್ಲರಿಗೂ ಸಿಹಿ-ತಿಂಡಿಗಳನ್ನು ಹಂಚಲಾಯಿತು.

LEAVE A REPLY

Please enter your comment!
Please enter your name here