


ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿಯಲ್ಲಿ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ನೆರವೇರಿತು.
ದೀಪ ಬೆಳಗಿಸುವುದರ ಮೂಲಕ ಶಾಲಾ ಪ್ರಾರಂಭೋತ್ಸವನ್ನು ಮಾಡಲಾಯಿತು.ಶಾಲಾ ಸಂಚಾಲಕರಾದ ವಂ.ಫಾ. ಎಲಿಯಾಸ್ ಡಿ ಸೋಜ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಹಶಿಕ್ಷಕಿ ಸಿ.ಫ್ರಾನ್ಸಿಸ್ ಮೇರಿ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸ್ಟೀವನ್ ಪಾಯ್ಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿದ್ಯಾರ್ಥಿಗಳು ಪ್ರಾರ್ಥನಾ ವಿಧಿಯ ಮೂಲಕ ಬೈಬಲ್, ಭಗವದ್ಗೀತೆ, ಕುರಾನ್ ವಾಚಿಸಿದರು. ವಿದ್ಯಾರ್ಥಿಗಳಿಗೆ ಹೂ ಕೊಟ್ಟು ಸ್ವಾಗತಿಸಲಾಯಿತು.ನಂತರ ಶಾಲಾ ಸಂಚಾಲಕರ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಹಶಿಕ್ಷಕಿ ನೀತಾರವರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಪ್ರೀತಿಯವರು ವಂದಿಸಿ ಸಹಶಿಕ್ಷಕಿಯರಾದ ಕವಿತಾ ಮತ್ತು ರಾಜೇಶ್ವರಿಯವರು ನಿರೂಪಿಸಿದರು.