ಹೊಸಂಗಡಿ ಗ್ರಾ.ಪಂ ನಲ್ಲಿ ನಿವೃತ್ತ ಇಂಜಿನಿಯರ್ ತಮಣ ಗೌಡ ಪಾಟೀಲ್ ಹಾಗೂ ಮುಖ್ಯಶಿಕ್ಷಕಿ ವಸಂತಿ ಕೆ. ಇವರಿಗೆ ಸನ್ಮಾನ

0

ಹೊಸಂಗಡಿ: ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ಜೂ.1 ರಂದು ನಡೆದ ಗ್ರಾಮಸಭೆಯಲ್ಲಿ ಪೆರಿಂಜೆ ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯಶಿಕ್ಷಕಿ ವಸಂತಿ ಕೆ., ಬೆಳ್ತಂಗಡಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ನಿವೃತ್ತ ಕಿರಿಯ ಇಂಜಿನಿಯರ್ ತಮಣ ಗೌಡ ಪಾಟೀಲ್, ಪಂಚಾಯತ್ ನಲ್ಲಿ ನರೇಗಾ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ನಿತೀಶ್ ಇವರನ್ನು ಸನ್ಮಾನಿಸಲಾಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿ, ಗ್ರಾಮ ಸಭೆಯ ಮಾರ್ಗದರ್ಶ ಅಧಿಕಾರಿ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಂದ್ರಶೇಖರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಾಗರತ್ನ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here