


ಮಡಂತ್ಯಾರು: ಸಹಕಾರಿ ಸಂಸ್ಥೆಗಳು ಜನರು ಜೀವನದ ಕಡೆ ನೋಡುವ ದೃಷ್ಟಿಕೋನವನ್ನು ಬದಲಾಯಿಸಿದೆ. ಜನರಿಗೆ ಉತ್ತಮ ಸೇವೆಯನ್ನು ನೀಡಿ ಜನತೆಯ ವಿಶ್ವಾಸವನ್ನು ಗಳಿಸಲಿ. ಸರಸ್ವತಿ ಸಹಕಾರಿ ಸಂಘ ತಮ್ಮದೇ ಆದಂತಹ ಸಂಸ್ಥೆಯನ್ನು ಸ್ಥಾಪಿಸಿ, ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಅವಕಾಶವನ್ನು ಕಲ್ಪಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಅವರು ಜೂ.1 ರಂದು ಮಂಡತ್ಯಾರಿನಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ (ನಿ) ಯ 18ನೇ ಶಾಖೆಯ ಉದ್ಘಾಟನೆಯನ್ನು ದೀಪ ಪ್ರಜ್ವಲಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಸುಸ್ಸಾನ , ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ, ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಗೌಡ, ಕರ್ನಾಟಕ ರಾ.ಸೌ.ಸಂ.ಸ.ನಿ. ನಿರ್ದೇಶಕ ಭಾರತಿ ಜಿ ಭಟ್, ಕರ್ನಾಟಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಯೋಜಕ ವಿಜಯ್, ಎ.ಯನ್ ಕಾಂಪ್ಲೆಕ್ಸ್ ಮಾಲಕ ವಸಂತಿ. ಜೆ. ಶೆಟ್ಟಿ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್ ಆರ್ ಸತೀಶ್ ಚಂದ್ರ ಬ್ಯಾಂಕ್ ನ ವ್ಯವಸ್ಥಾಪಕ ಪುರುಷೋತ್ತಮ ನಾಯಕ್ ಉಪಸ್ಥಿತರಿದ್ದರು.
