ಮಹೇಶ್ ಶೆಟ್ಟಿಯವರ ಹಿಂದುತ್ವದ ಬಗ್ಗೆ ಪ್ರಶ್ನಿಸುವ ಹಕ್ಕು ಶಶಿರಾಜ್ ಶೆಟ್ಟಿ ಅವರಿಗೆ ಇಲ್ಲ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಯವರ ಹಿಂದುತ್ವದ ಬಗ್ಗೆ ಶಶಿರಾಜ್ ಶೆಟ್ಟಿ ಆರೋಪ ಮಾಡಿದ್ದಾರೆ. ಇವರು ಆರೋಪ ಮಾಡಲು ಯಾರು?, ಇವರಿಗೆ ಏನು ನೈತಿಕತೆ ಇದೆ? ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಹೇಳಿದರು. ಅವರು ಜೂ.2 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಯಾರು ಯಾರಿಗೂ ಬೆಂಬಲ ಮಾಡಬಹುದು, ಇದು ಪ್ರಜಾಪ್ರಭುತ್ವ ಸಂವಿಧಾನದ ವ್ಯವಸ್ಥೆ. ಆದರೆ ಶಾಸಕ ಹರೀಶ್ ಪೂಂಜರು ಅವರ ವಿಜಯೋತ್ಸವ ಸಂದರ್ಭದಲ್ಲಿ ಹಿಂದೂ ನಾಯಕರುಗಳ ಬಗ್ಗೆ ಆರೋಪ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಮಹೇಶ್ ಶೆಟ್ಟಿ ನೀಡಿದ್ದಾರೆ. ಆದರೆ ಮಹೇಶ್ ಶೆಟ್ಟಿಯವರ ಉತ್ತರಕ್ಕೆ ಶಶಿರಾಜ್ ಶೆಟ್ಟಿ ಉತ್ತರ ಕೊಡಲು ಯಾರು?, ಶಶಿರಾಜ್ ರವರಿಗೆ ತಮ್ಮ ಬೋರ್ ವೆಲ್ ಎಜೆನ್ಸಿಗೆ ಮಹೇಶ್ ಶೆಟ್ಟಿ ಸಾಕಷ್ಟು ಸಹಕಾರ ಮಾಡಿದ್ದಾರೆ.ಆದರೆ ಇವರೇ ಮಹೇಶ್ ಶೆಟ್ಟಿಯವರಿಂದ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.ಮಹೇಶ್ ಶೆಟ್ಟಿಯವರು ಕಳೆದ 31 ವರ್ಷಗಳಿಂದ ಹಿಂದೂ ಸಂಘಟನೆ ಮೂಲಕ ಹಿಂದೂಗಳಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಿದವರು.ಇವರು ಐಟಿಸಿ /ಓಟಿಸಿ ಮಾಡಿ ಹಿಂದೂ ಧರ್ಮದ ಪರವಾಗಿ ಹೋರಾಟ ಮಾಡಿದ ನಾಯಕ. ಇವರ ಹಿಂದುತ್ವದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದರು.


ನನ್ನ ಮಗಳ ಹೆಸರನ್ನು ಹೇಳಲು ಶಶಿರಾಜ್ ಶೆಟ್ಟಿ ಯಾರು?- ಸೌಜನ್ಯಾಳ ತಾಯಿ ಕುಸುಮಾವತಿ
ನನ್ನ ಮಗಳು ಸೌಜನ್ಯ ಹತ್ಯೆಯಾದ ಬಳಿಕ ನಮ್ಮೊಂದಿಗೆ ಹೋರಾಟ, ಬೆಂಬಲಕ್ಕೆ ನಿಂತವರು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು. ಶಶಿರಾಜ್ ಶೆಟ್ಟಿ ನನ್ನ ಮಗಳು ಸೌಜನ್ಯರ ಹೆಸರನ್ನು ರಾಜಕೀಯಕ್ಕೆ ಏಳೆಯಲು ಯಾರು?, ಅವರು ಯಾರು ಎಂದು ನನಗೆ ಗೊತ್ತೇ ಇಲ್ಲ.ಅವರು ಮಾತನಾಡುವುದಾದರೆ ಹತ್ಯೆಯಾದ ನನ್ನ ಮಗಳಿಗೆ ನ್ಯಾಯ ಒದಗಿಸಿ ಕೊಡಲಿ ಅಥವಾ ನನ್ನ ಮಗಳನ್ನು ಬದುಕಿಸಿ ಕೊಡಲಿ ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಚಾಲಕ ಮನೋಜ್ ಕುಂಜರ್ಪ, ಗೌರವ ಅಧ್ಯಕ್ಷ ಹರೀಶ್ ಬರಮೇಲು, ಕಾರ್ಯಕರ್ತರಾದ ಜಗದೀಶ್ ಹೆಡ್ಯ, ಪ್ರಜ್ವಲ್, ವಿಠ್ಠಲ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here