ಡಾ|| ವೈ.ಉಮಾನಾಥ ಶೆಣೈಯವರಿಗೆ ಆರ್ಯಭಟ ಪ್ರಶಸ್ತಿಯ ಗೌರವ

0

ಬೆಳ್ತಂಗಡಿ: ನಾಡಿನ ಖ್ಯಾತ ಇತಿಹಾಸ ತಜ್ಞರಾದ ಡಾ|| ವೈ.ಉಮಾನಾಥ ಶೆಣೈಯವರಿಗೆ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆರ್ಯಭಟ ಅಂತರ್ ರಾಷ್ಟ್ರೀಯ ಸಾಂಸ್ಕೃತಿಕ ಸಂಘದ ಸ್ಥಾಪಕರಾದ ಡಾ|| ಎಚ್.ಎಲ್.ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶ ಶ್ರೀ ಪಿ.ಎಸ್‌. ದಿನೇಶ್ ಕುಮಾರ್ ರವರು ಉದ್ಘಾಟಿಸಿ ಶುಭಕೋರಿದರು.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ|| ಮಹೇಶ್ ಜೋಶಿಯವರು ಮತ್ತು ಚಲನಚಿತ್ರರಂಗದ ದಿಗ್ಗಜ ಟಿ.ಎಸ್. ನಾಗಭರಣ ಮುಖ್ಯ ಅತಿಥಿಗಳಾಗಿದ್ದರು.

ಡಾ.ರಾಜ್‌ಕುಮಾರ್, ಎಂ.ಸಿ.ಮೋದಿ, ಹಿನ್ನಲೆ ಗಾಯಕ ಡಾ|| ಎಸ್‌.ಪಿ. ಬಾಲಸುಬ್ರಹ್ಮಣ್ಯ, ಲೋಕಾಯುಕ್ತ ಅಧ್ಯಕ್ಷ ನ್ಯಾ. ವೆಂಕಟಾಚಾಲಯ್ಯ ಮೊದಲಾದ ಹಿರಿಯರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಈ ಕಾಲದ 58 ಹಿರಿಯ ಸಾಧಕರಿಗೆ ಈ ಬಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಪೈಕಿ ಅಮೇರಿಕದ ಬೋಸ್ಟನ್ ನಗರದವರು, ಬಹ್ ರೈನ್‌, ಆಫ್ರಿಕಾದ ಇಥಿಯೋಪಿಯ, ಸಿಂಗಾಪುರ್, ಮಲೇಶ್ಯಾದ ಸಾಧಕರು, ಕರ್ನಾಟಕ ಎಡಿಷನಲ್ ಅಡ್ವೋಕೇಟ್ ಜನರಲ್, ಕಾಂತಾರ ಚಲನಚಿತ್ರದ ರಿಷಬ್‌ ಶೆಟ್ಟಿ ಮುಂತಾದವರು ಸೇರಿದ್ದರು. ದೇಶ-ವಿದೇಶಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಸಮಾಜದ ಅನೇಕ ಪ್ರತಿಷ್ಠಿತರು ಹಾಜರಿದ್ದುದು ಗಮನೀಯವಾಗಿತ್ತು.

p>

LEAVE A REPLY

Please enter your comment!
Please enter your name here