


ಬೆಳ್ತಂಗಡಿ: ರೈತ ಸಂಘದ ಬೆಂಬಲದಿಂದ ಸರ್ವೋದಯ ಕರ್ನಾಟಕ ಪಕ್ಷ ಭ್ರಷ್ಟಾಚಾರ ರಹಿತ ಜನಪರ ಆಡಳಿತಕ್ಕಾಗಿ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಸೇರಿ ರಾಜ್ಯದ 8 ಕಡೆ ಸ್ಪರ್ಧೆ ಮಾಡುತ್ತಿದೆ. ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಅಧ್ಯಕ್ಷ ಚಾಮರಸ ಪಾಟೀಲ್ ಹೇಳಿದರು. ಅವರು ಮೇ.3 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಇದು ವರೆಗೆ ಆಡಳಿತ ನಡೆಸಿದ ಸರಕಾರಗಳು ಜನ ಸೇವೆಯ ಬದಲಾಗಿ ಸ್ವಾರ್ಥ ಸಾಧನೆ ಮಾಡಿದೆ. ಹಿಂದೆ ದೇಶದಲ್ಲಿ 35 ಕೋಟಿ ಜನಸಂಖ್ಯೆ ಇರುವಾಗ ದೇಶದಲ್ಲಿ ಆಹಾರದ ಕೊರತೆ ಇದ್ದು ಸಂಕಷ್ಟದಲ್ಲಿ ಇತ್ತು. ಆದರೆ ಈಗ 135 ಕೋಟಿ ಜನಸಂಖ್ಯೆ ಆದರೂ ದೇಶದ ರೈತರ ಪರಿಶ್ರಮದಿಂದ ಕೃಷಿ ಯಲ್ಲಿ ಸಾಧನೆ ಮಾಡಿದೆ ಆದರೆ ಸರಕಾರಗಳು ರೈತ ವಿರೋಧಿ ನೀತಿಯಿಂದ, ಪ್ರೋತ್ಸಾಹ ಇಲ್ಲದೆ, ಬೆಂಬಲ ಬೆಲೆ ಇಲ್ಲದೆ ರೈತರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ, ರೈತರ ಫಸಲ್ ಬಿಮಾ ಯೋಜನೆಯಿಂದ ಸಂಕಷ್ಟದ ರೈತರಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿದರು.
ಸರ್ವೋದಯ ಕರ್ನಾಟಕ ಪಕ್ಷವನ್ನು ಜನಸಾಮಾನ್ಯರ ಸರ್ವಾಂಗೀಣ ಅಭಿವೃದ್ಧಿಗಾಗಿ, ಆರಂಭಿಸಲಾಗಿದೆ.
ಯಾವುದೇ ರಾಷ್ಟ್ರೀಯ ಪಕ್ಷದ ಪ್ರಣಾಳಿಕೆಗಿಂತ ಭಿನ್ನವಾಗಿ, ಸರ್ವೋದಯ ಕರ್ನಾಟಕ ಪಕ್ಷವು ಯಾವುದೇ ಉಚಿತ ಕೊಡುಗೆಗಳಿಲ್ಲದೆ ಪ್ರಾಣಾಂತಿಕವನ್ನು ಯೋಜಿಸಿದ ಮತ್ತು ಸಾಮಾನ್ಯ ವ್ಯಕ್ತಿ ಮಧ್ಯಮ ವರ್ಗದ ಜನರು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರ, ಮಧ್ಯಮ ಗಾತ್ರದ ವ್ಯಾಪಾರದವರು, ಬಡವರು, ರೈತರು, ವಿಧವೆಯರು, ಮಹಿಳೆಯರನ್ನು ಬೆಂಬಲಿಸುವ ಉದ್ದೇಶದಿಂದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಮಗುವಿನ ಜನನದಿಂದ ವೃದ್ಧಾಪ್ಯ ಮುಗಿಯುವವರೆಗೆ ಜನ ಸಾಮಾನ್ಯರನ್ನು ಬೆಂಬಲಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕಾಳಜಿ ವಹಿಸಲಾಗಿದೆ ಎಂದರು.
ಪಕ್ಷ ದ ಬೆಳ್ತಂಗಡಿ ಶಾಸಕ ಅಭ್ಯರ್ಥಿ ಮತ್ತು ರೈತ ಸಂಘದ ಯುವ ನಾಯಕ ಆದಿತ್ಯ ಕೊಲ್ಲಾಜೆ ಪಕ್ಷದ ಪ್ರಣಾಳಿಕೆಯ ವಿವರ ನೀಡಿ ಗ್ರಾಮಾಭಿವೃದ್ಧಿ, ಅತಿಥ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ಪ್ರವಾಸೋದ್ಯಮ ವೃದ್ಧಾಪ್ಯ, ರೈತರು, ಅನಾಥರು, ವಿಧವೆಯರು ಮತ್ತು ವಿಶೇಷ ಸಾಮರ್ಥ್ಯದಂತಹ ಎಲ್ಲಾ ಅಂಶಗಳು ನಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ, ಜಿಲ್ಲಾ ಅಧ್ಯಕ್ಷ ಒಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಜಿಲ್ಲಾ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಅವಿನಾಶ್, ಕಾರ್ಯದರ್ಶಿ ದೇವಪ್ಪ ನಾಯ್ಕ, ಕೊಪ್ಪಲ ಬೀಮ್ ಸಮ್ ಕರ್ಕೇರಿ ಉಪಸ್ಥಿತರಿದ್ದರು.