ಕೊಕ್ಕಡ: ಕಳೆದ ಮಾರ್ಚ್‌ನಲ್ಲಿ ಕೊಕ್ಕಡದ ಸರಕಾರಿ ಪ್ರೌಢ ಶಾಲೆಗೆ ನುಗ್ಗಿ ಶಾಲೆಯೊಳಗೆ ಇದ್ದ ಸುಮಾರು ರೂ.3.20 ಲಕ್ಷ ಮೌಲ್ಯದ ಆ ನಿರುಪಯುಕ್ತ ಬ್ಯಾಟರಿಗಳನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮಾ.27ರಂದು ಕಳ್ಳರು ಶಾಲೆಯ ಒಳಗೆ ನುಗ್ಗಿ ಕೊಠಡಿಯಲ್ಲಿದ್ದ ನಿರುಪಯುಕ್ತ ಬ್ಯಾಟರಿಯನ್ನು ಕಳವು ಮಾಡಿದ ಬಗ್ಗೆ ಪ್ರಭಾರ ಮುಖ್ಯೋಪಾಧ್ಯಾಯ ಹಲ್ಲಿಂಗೇರಿ ಪ್ರಭಾಕರ ನಾಯ್ಕ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಇದೀಗ ಆರೋಪಿಗಳಾದ ರಕ್ಷಿತ್ ಡಿ (24 ವರ್ಷ) ಬೋಲ ಮನೆ ಕುಟ್ರಪಾಡಿ ಕಡಬ, ತೀರ್ಥ ಎಂ(29 ವರ್ಷ) ಮೀನಾಡಿಮನೆ, ಕುಟ್ರಪಾಡಿ, ಯದ್ದೇಶ್ ಯು.ಕೆ (30 ವರ್ಷ) ಉರುಂಬಿ ಮನೆ, ಕುಟ್ರಪಾಡಿ, ಲೋಹಿತ್ ಹೆಚ್. ಶೆಟ್ಟಿ (23 ವರ್ಷ) ಹಳ್ಳಿಮನೆ, ಗ್ರಾಮ, ಕಡಬ ಅಂಚೆ, ಕಡಬ ತಾಲೂಕುರವರುಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಗಳು ಉಪ್ಪಿನಂಗಡಿಯ ನಾಲ್ಕು ಸರಕಾರಿ ಶಾಲೆಗಳಿಂದ, ಸುಬ್ರಹ್ಮಣ್ಯದ ಎರಡು ಸರಕಾರಿ ಶಾಲೆಗಳಿಂದ, ಪುತ್ತೂರಿನ ಒಂದು ಶಾಲೆಯಿಂದ, ಬಂಟ್ವಾಳದ ಒಂದು ಶಾಲೆ ಮತ್ತು ಧರ್ಮಸ್ಥಳದ ಒಂದು ಶಾಲೆಯಿಂದ ಸೇರಿದಂತೆ ದ.ಕ ಜಿಲ್ಲೆಯ 39 ಸರಕಾರಿ ಪ್ರೌಢ ಶಾಲೆಗಳಿಂದ ಸುಮಾರು ರೂ.2ಲಕ್ಷ ಮೌಲ್ಯದ ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿಗಳಿಂದ ರೂ.1 ಲಕ್ಷದ ಮಾರುತಿ ಅಲ್ಟೋ ಕಾರು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ಲಿವರ್, ಕಟ್ಟಿಂಗ್ ಪ್ಲೇಯರ್, ಅಕ್ಸೋ ಬೇಡ್, ಟಾರ್ಚ್, ಟೋಪಿ, ಸೇರಿದಂತ ಅಂದಾಜು ಮೌಲ್ಯ ರೂ.3 ಲಕ್ಷದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆಗಾಗಿ ಎಸ್.ಪಿ ಡಾ| ವಿಕ್ರಮ್ ಅಮಟೆ ಐ.ಪಿ.ಎಸ್ ರವರ ನಿರ್ದೇಶನದಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎನ್.ಎಂ. ಬಂಟ್ವಾಳ ಡಿ.ವೈ.ಎಸ್.ಪಿ ಪ್ರತಾಪ್ ಸಿಂಗ್ ಥೋರಾಟ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ ರವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು) ಅನೀಲಕುಮಾರ ಡಿ.ಪಿ.ಎಸ್.ಐ (ತನಿಖೆ) ರೇಣುಕ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿ.ಎಸ್.ಐ ಸ್ಯಾಮುವೆಲ್, ರಾಜೇಶ್, ಪ್ರಶಾಂತ, ಸತೀಶ ನಾಯ್ಕ ಲಾರೆನ್ಸ್ ಪಿ.ಆರ್, ಕೃಷ್ಣಪ್ಪ ಶೇಖರ ಗೌಡ, ಮಂಜುನಾಥ, ಪ್ರಮೋದಿನಿ, ಅನಿಲ್ ಕುಮಾರ್, ಜಗದೀಶ, ಹರೀಶ್, ನಾಗರಾಜ, ರಾಧಾ ಕೋಟ್ಯಾನ್ ಮತ್ತು ವಾಹನ ಚಾಲಕ ಲೋಕೇಶ್ ಸಹಕರಿಸಿದರು.