ನಮ್ಮ ಹೆಮ್ಮೆಯ ಸುದ್ದಿ ಪತ್ರಿಕೆ ಉಳಿಸಿ, ಪೂಂಜಾ ಹಠಾವೋ ಬೆಳ್ತಂಗಡಿ ಬಚಾವೋ | ಸುದ್ದಿ ಪತ್ರಿಕೆಯ ಸಿಬ್ಬಂದಿಗಳ ಹೈಜಾಕ್ ನಿಲ್ಲಿಸಿ ಪೋಸ್ಟ್ ಗೂ ಸುದ್ದಿ ಸಂಸ್ಥೆಗೂ ಸಂಬಂಧವಿಲ್ಲ

0


ಬೆಳ್ತಂಗಡಿ: ಫೇಸ್ ಬುಕ್ ನಲ್ಲಿ ಸಂತೋಷ್ ಸಂತೋಷ್ ಎಂಬವರ ಹೆಸರಲ್ಲಿರುವ ಅಕೌಂಟ್ ನ ಒಂದು ಪೋಸ್ಟಿಗೂ ಸುದ್ದಿಗೂ ಸಂಬಂಧವಿಲ್ಲ ಎಂದು ಸುದ್ದಿ ಆಡಳಿತ ಮಂಡಳಿ ಸ್ಪಷ್ಟಪಡಿಸುತ್ತಿದೆ.
ಖಾಸಗಿ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯಲ್ಲಿ ಶಾಸಕರಾದ ಹರೀಶ್ ಪೂಂಜ ಮತ್ತು ಸುದ್ದಿ ಸಂಪಾದಕರಾದ ಡಾ.ಯು.ಪಿ.ಶಿವಾನಂದ್ ಅವರ ಹೇಳಿಕೆಗಳನ್ನು ಬಳಸಿಕೊಂಡು “ಸುದ್ದಿ ಪತ್ರಿಕೆಯ ಸಿಬ್ಬಂದಿಗಳ ಹೈಜಾಕ್ ನಿಲ್ಲಿಸಿ, ನಮ್ಮ ಹೆಮ್ಮೆಯ ಪತ್ರಿಕೆ ಉಳಿಸಿ, ಪೂಂಜ ಹಠಾವೋ ಬೆಳ್ತಂಗಡಿ ಬಚಾವೋ” ಎಂಬ ಪೋಸ್ಟರ್ ರೆಡಿಮಾಡಿ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ನ ಸ್ಕ್ರೀನ್ ಶಾಟ್ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಆದರೆ ಇಂತಹ ಅಭಿಯಾನಕ್ಕೂ ಸುದ್ದಿ‌ ಸಂಸ್ಥೆಗೂ ಸಂಬಂಧವಿಲ್ಲ. ಅಲ್ಲದೇ,ಇಂತಹ ಅಭಿಯಾನಕ್ಕೆ ನಾವೂ ಪ್ರೋತ್ಸಾಹವನ್ನೂ ನೀಡುವುದಿಲ್ಲ, ಇದು ನಮ್ಮ‌ ಆಂದೋಲನವಲ್ಲ ಇದಕ್ಕೆ ನಮ್ಮ ಬೆಂಬಲವಿಲ್ಲ ಈ ರೀತಿಯ ಪ್ರಚಾರಕ್ಕೆ‌ ನಮ್ಮ‌ವಿರೋಧವಿದೆ, ದಯವಿಟ್ಟು ‌ಆ ರೀತಿಯ ಸಾಮಾಜಿಕ‌ ಜಾಲತಾಣದಲ್ಲಿ ಪ್ರಚಾರ ಮಾಡಬಾರದು, ಅದನ್ನು ನೋಡಿದವರು ಅದನ್ನು ಅಲ್ಲಿಗೆ ಬಿಡಬೇಕು ಮತ್ತು‌ಯಾವುದೇ ಪ್ರಚಾರ ಮಾಡಬಾರದೆಂದು‌ ವಿನಂತಿ ಮಾಡುತ್ತೇವೆ. ಸುದ್ದಿ ಪತ್ರಿಕೆ ಯಾವುದೇ ಬಳಗಕ್ಕೆ ಅಥವಾ ಪಕ್ಷಕ್ಕೆ ಸೇರಿದ್ದಲ್ಲವೆಂದು ತಿಳಿಸಲು ಇಚ್ಛಿಸುತ್ತೇವೆ. ಈ‌ ವಿಚಾರವನ್ನು ‌ಶಾಸಕರಾದ ಹರೀಶ್ ಪೂಂಜ ಮತ್ತು ಅವರ ಬಳಗದ ಗಮನಕ್ಕೆ ತರಲು ಇಚ್ಛಿಸುತ್ತೇನೆ ಎಂದು ಸ್ಪಷ್ಟಪಡಿಸುತ್ತೇವೆ. – ಡಾ. ಶಿವಾನಂದ ಮತ್ತು ಸುದ್ದಿ ಬಳಗ

LEAVE A REPLY

Please enter your comment!
Please enter your name here