ಬೆಳ್ತಂಗಡಿ : ಸಂತ ಲಾರೆನ್ಸ್ ಕ್ಯಾಥೆಡ್ರಲ್ ನಲ್ಲಿ ಈಸ್ಟರ್ ಹಬ್ಬದ ಆಚರಣೆ ನಡೆಯಿತು. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಲ್ಲಿ ಒಟ್ಟು 55 ಚರ್ಚ್ ಗಳಲ್ಲಿ ಈಸ್ಟರ್ ಹಬ್ಬದ ವಿಧಿವಿಧಾನ ನಡೆದು ಹಬ್ಬ ಆಚರಿಸಲಾಯಿತು.
ಏಸು ಸ್ವಾಮಿಯು ಯಾತನೆಯನ್ನು ಅನಭವಿಸಿ ಮರಣ ಹೊಂದಿ ಪುನರುತ್ಥಾನಗೊಂಡ ದಿನದ ಅನುಸ್ಮರಣೆಯೇ ಈಸ್ಟರ್ ಹಬ್ಬ. ಬೆಳ್ತಂಗಡಿ ಲಾರೆನ್ಸ್ ಕ್ಯಾಥೆಡ್ರಲ್ ನಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕಯಿ ಯವರು ಈಸ್ಟರ್ ಹಬ್ಬದ ವಿಧಿವಿಧಾನ ನೆರವೇರಿಸಿ ದಿವ್ಯ ಬಲಿ ಪೂಜೆ ಅರ್ಪಿಸಿದರು. ನಂತರ ಏಸು ಸ್ವಾಮಿಯು ಪುನರುತ್ಥಾನದ ಸ್ಮರಿಸುವ ಮೆರವಣಿಗೆಯಲ್ಲಿ ಧರ್ಮಭಗಿನಿಯಾರು , ಭಕ್ತಾದಿಗಳು ಭಕ್ತಿ ಪೂರ್ವಕ ವಾಗಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಫಾ.ಜೋಸೆಫ್ ಮಟ್ಟಂ ಪ್ರವಚನ ನೀಡಿದರು. ಕ್ಯಾಥೆಡ್ರಲ್ ಧರ್ಮಗುರು ಫಾ. ತೋಮಾಸ್ ಕಣ್ಣಂಗಲ್, ಜುಡಿಷಿಯಲ್ ವಿಗಾರ್ ಫಾ. ಕುರಿಯಕೊಸ್, ಚಾನ್ಸುಲರ್ ಫಾ. ಲಾರೆನ್ಸ್ ಪುನೊಳಿಲ್, ಪ್ರೋಕ್ಯುರೆಟರ್ ಫಾ. ಅಬ್ರಹಂ, ಒ. ಸಿ. ಡಿ. ಧರ್ಮಗುರು ಫಾ. ವಿನ್ಸೆಂಟ್ ಉಪಸ್ಥಿತರಿದ್ದರು.