


ಬೆಳ್ತಂಗಡಿ: ಬೆಳ್ತಂಗಡಿ ರೆಡ್‌ಕ್ರಾಸ್ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಸುಡುಬಿಸಿಲಿಗೆ ಬಾಯಾರಿದ ಸಾರ್ವಜನಿಕರಿಗೆ ಏ.7ರಂದು ಮಜ್ಜಿಗೆ ವಿತರಿಸಲಾಯಿತು.
ಜನರ ಬಾಯಾರಿಕೆ ತಣಿಸಲೆಂದೇ ರೆಡ್‌ಕ್ರಾಸ್ ವತಿಯಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಗಿದ್ದು, ರೆಡ್‌ಕ್ರಾಸ್ ಸಂಸ್ಥೆಯ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಅಧ್ಯಕ್ಷ ಹರಿಪ್ರಸಾದ್, ಕಾರ್ಯದರ್ಶಿ ಯಶವಂತ ಪಟವರ್ಧನ್, ಸದಸ್ಯರಾದ ಶ್ರೀಮತಿ ಸುಕನ್ಯಾ, ಪರಿಮಳ, ಸುಜಿತ್ ಉಪಸ್ಥಿತರಿದ್ದರು.