ಧರ್ಮಸ್ಥಳ: ಬಿಸಿಲಿನ ಬೇಗೆಯ ನಡುವೆ ಧರ್ಮಸ್ಥಳ ಉಜಿರೆಯಲ್ಲಿ ಸಂಜೆ ಹೊತ್ತಿಗೆ ಗುಡುಗು, ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗಿದೆ.
ಮೋಡ ಕವಿದ ವಾತಾವರಣ ನೋಡಿದಾಗ ಭಾರೀ ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದರು.ಆದರೆ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಇನ್ನು ತಾಲೂಕಿನ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಇಂದು ರಾತ್ರಿ ಮಳೆಯಾಗುವ ಸಾಧ್ಯತೆಯಿದೆ.ಕೆಲವೆಡೆ ಈಗಾಗಲೇ ತುಂತುರು ಮಳೆಯಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
p>