ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಐತಿಹಾಸಿಕ ಕರಗ ಶಕ್ತ್ಯೋತ್ಸವ ಅದ್ದೂರಿಯಾಗಿ ನೆರವೇರಿ, ಚೈತ್ರ ಪೌರ್ಣಿಮೆಯ ಬೆಳದಿಂಗಳಿನಲ್ಲಿ ಮಲ್ಲಿಗೆಯ ಕಂಪಿನೊಂದಿಗೆ ಕರಗ ಶಕ್ತ್ಯೋತ್ಸವ ಆರಂಭವಾಗಿ, ನಗರದ ಅನೇಕ ಕಡೆ ಕರಗ ಮೆರವಣಿಗೆ ಸಾಗಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗಡೆಯವರು ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿ, ಕರಗದ ವೈಭವವನ್ನು ಕೂಡ ನೋಡಿದರು. ಈ ವೇಳೆ ಅವರ ಸಹೋದರ ಸುರೇಂದ್ರ ಕುಮಾರ್ ರವರು ಹೆಗ್ಗಡೆಯವರಿಗೆ ಸಾಥ್ ನೀಡಿದರು.
ಆ ನಂತರ ಆರಂಭವಾದ ಕರಗ ಮೆರವಣಿಗೆ, ನಗರದ ಕೆಲ ಭಾಗಗಳ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಗರದ ಅನೇಕ ಕಡೆ ಸಾಗುವ ಮೂಲಕ ಲಕ್ಷಾಂತರ ಜನರಿಗೆ ದರ್ಶನ ನೀಡಿದೆ.
p>