





ಕೊಕ್ಕಡ: ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿದ್ದಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲೂ ಬಿಗಿ ಬಂದೋಬಸ್ತ್ ಜೊತೆ ಚೆಕ್ ಪೋಸ್ಟ್ ಗಳನ್ನು ಮೂರು ಕಡೆ ಮಾಡಲಾಗಿದೆ.


ನಾರಾವಿ,ಕೊಕ್ಕಡ ಮತ್ತು ಚಾರ್ಮಾಡಿಯಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಚುನಾವಣೆಯಲ್ಲಿ ಆಗಬಹುದಾದ ಅಕ್ರಮಗಳನ್ನು ತಡೆಯಲು ನಿರ್ಮಿಸಿರುವ ಚೆಕ್ ಪೋಸ್ಟ್ ಗಳನ್ನು ತಹಶೀಲ್ದಾರ್ ಸುರೇಶ್ ಟಿ ಎಸ್ ಪರಿಶೀಲನೆ ನಡೆಸಿದರು.

ಕೊಕ್ಕಡದಲ್ಲಿ ಪರಿಶೀಲನೆ ನಡೆಸುವ ವೇಳೆ ಸುದ್ದಿಯೊಂದಿಗೆ ಮಾತನಾಡಿದ ತಹಶೀಲ್ದಾರ್ “ಈಗಾಗ್ಲೇ ಚೆಕ್ ಪೋಸ್ಟ್ ಹಾಕಲಾಗಿದ್ದು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ ” ಎಂದರು.








