ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಲ್ಲಿ ನಡೆಯುತ್ತಿರುವ 63 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.30 ರಂದು ರಾಮ ನವಮಿಯಂದು ಕ್ಷೇತ್ರದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆ 63 ನೇ ವರ್ಷದ ಶ್ರೀರಾಮ ತಾರಕ ಸಪ್ತಾಹದ ಮಂಗಳ, ವಾಗ್ದೇವಿ ಯಜ್ಞ, ಶಾಂತಿ ಹೋಮ, ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮೂರ್ತಿ ಬಲಿ, ಸಂಜೆ ಬಲಿ, ಭೂತ ಬಲಿ, ಪಾಲಕಿ ಬಲಿ ಉತ್ಸವ ನಡೆಯಿತು. ರಾತ್ರಿ ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ, ಮಹಾ ಬ್ರಹ್ಮ ರಥೋತ್ಸವ ಜರಗಿತು.
ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ವಿವಿಧ ಜನಪ್ರತಿನಿಧಿಗಳು, ಗಣ್ಯರು, ಊರ ಪರಊರ ಭಕ್ತರು ಭಾಗವಹಿಸಿದ್ದರು. ಬೆಂಗಳೂರಿನ ಉದ್ಯಮಿ ವೆಂಕಟೇಶ್ ರವರು ದೇವಸ್ಥಾನದ ವಿಶೇಷ ಹೂವಿನ ಅಲಂಕಾರ ಸೇವೆ ಮಾಡಿದ್ದರು.
p>