ಶ್ರೀ ರಾಮ ಕ್ಷೇತ್ರದಲ್ಲಿ ಬೆಳ್ಳಿ ರಥೋತ್ಸವ

0

ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಲ್ಲಿ ನಡೆಯುತ್ತಿರುವ 63 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.28 ರಂದು ಸಹಸ್ರನಾಮ ಯಾಗ, ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ಮೂರ್ತಿ ಬಲಿ ಉತ್ಸವ, ಬೆಳ್ಳಿ ರಥೋತ್ಸವ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರಗಿತು.

ಸಂಜೆ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕ ಅಶೋಕ ಭಟ್ ನೇತೃತ್ವದಲ್ಲಿ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ಶಿವ ಭಕ್ತ ವೀರಮಣಿ ಯಕ್ಷಗಾನ ಬಯಲಾಟ ಜರಗಿತು.
ಮಾ.30 ರಂದು ಬೆಳಿಗ್ಗೆ 63 ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹದ ಮಂಗಳ, ವಾಗ್ದೇವಿ ಯಜ್ಞ, ಶಾಂತಿ ಹೋಮ, ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮೂರ್ತಿ ಬಲಿ ಸಂಜೆ ಬಲಿ, ಭೂತ ಬಲಿ, ಪಾಲಕಿ ಬಲಿ ಉತ್ಸವ, ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ, ಮಹಾ ಬ್ರಹ್ಮ ರಥೋತ್ಸವ ಜರಗಲಿದೆ.

p>

LEAVE A REPLY

Please enter your comment!
Please enter your name here