ಶ್ರವಣಬೆಳಗೊಳದ ಇಂದಿನ ಸ್ವಾಮೀಜಿ ರಚಿಸಿದ ಹೆಗ್ಗಡೆಯವರ ಕಲಾಕೃತಿ

0

ಧರ್ಮಸ್ಥಳ: ಶ್ರವಣಬೆಳಗೊಳದ ಜೈನಮಠದ ನೂತನ ಭಟ್ಟಾರಕರಾಗಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಎಂಬ ನಾಮಕರಣದೊಂದಿಗೆ ಪಟ್ಟಾಭಿಷಿಕ್ತರಾದ  ಸ್ವಾಮೀಜಿ ತಮ್ಮ ಪೂರ್ವಾಶ್ರಮದಲ್ಲಿ ಅಪೂರ್ವ ಚಿತ್ರಕಲಾವಿದರೂ ಆಗಿದ್ದರು.
ಅವರು ಮಾ.27 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಕಲಾಕೃತಿಯನ್ನು ರಚಿಸಿ ಅವರು ಎರಡು ವರ್ಷಗಳ ಹಿಂದೆ ಹೆಗ್ಗಡೆಯವರಿಗೆ ಸಮರ್ಪಿಸಿದ್ದರು.  ಅವರ ಕಲಾಕೌಶಲವನ್ನು ಶ್ಲಾಘಿಸಿ ಹೆಗ್ಗಡೆಯವರು ಅವರನ್ನು ಅಭಿನಂದಿಸಿದ್ದರು. ಈ ಕಲಾಕೃತಿಯನ್ನು ಧರ್ಮಸ್ಥಳದಲ್ಲಿ ಗ್ರಂಥಾಲಯದಲ್ಲಿ ಸಂರಕ್ಷಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ಪೂರ್ವಾಶ್ರಮದಲ್ಲಿ ಆಗಮ ಇಂದ್ರ ಎಂಬ ಹೆಸರನ್ನು ಹೊಂದಿದ್ದ ಅವರು ಪದವಿಪೂರ್ವ ಶಿಕ್ಷಣವನ್ನು ಉಜಿರೆಯಲ್ಲಿ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪೂರೈಸಿದ್ದರು. ಆಗ ಸಿದ್ದವನ ಗುರುಕುಲದಲ್ಲಿ ವಾಸ್ತವ್ಯ ಇದ್ದರು. ಅವರ ತಾಯಿ ಮೂಲತಃ ಉಜಿರೆ ನಿವಾಸಿಯಾಗಿದ್ದರು.

LEAVE A REPLY

Please enter your comment!
Please enter your name here