


ಇಂದಬೆಟ್ಟು: ಬಂಗಾಡಿ 2ನೇ ವಾರ್ಡ್ ನಲ್ಲಿರುವ 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಆಂಗನವಾಡಿ ಕೇಂದ್ರದಲ್ಲಿ ಪ್ರಾರಂಭದಲ್ಲಿ 20-25 ಮಕ್ಕಳಿದ್ದು, ಈಗ ಇಲ್ಲಿ ಹಲವು ಸಮಯಗಳಿಂದ ಕುಡಿಯಲು ಹಾಗೂ ಶೌಚಾುಯಕ್ಕೆ ನೀರೆ ಇಲ್ಲ, ಪಂಚಾಯತಿಂದ ಬರುವ ನಳ್ಳಿ ನೀರು ಆಂಗನವಾಡಿವರೆಗೆ ತಲುಪುವುದೆ ಇಲ್ಲ, ಮಕ್ಕಳು ಶೌಚಾಲಯವಿದ್ದರು ನೀರಿಲ್ಲದ ಕಾರಣ ಆಂಗನವಾಡಿಯ ಹೊರಗಡೆ ಬರಬೇಕು. ಇದರ ಸುತ್ತಮುತ್ತ ಸರಿಯಾದ ಕಂಪೌಂಡ್ ಇಲ್ಲ. ಬದಿಯಲ್ಲೆ ದೊಡ್ಡ ಹೊಂಡಗಳಿದ್ದು ಅಪಾಯಕಾರಿಯಾಗಿದೆ.



ಸುತ್ತಮುತ್ತ ಗೊಡೆ ಬದಿಯಲ್ಲೆ ಗೀಡ ಗಂಟಿಗಳು ಬೆಳೆದು ಹಾವು ಹೆಗ್ಗಣಗಳ ವಾಸ ಸ್ಥಳವಾಗಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಪೊಷಕರು ಮಕ್ಕಳನ್ನು ಆಂಗನವಾಡಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಈಗ 10-12 ಮಕ್ಕಳಿದ್ದಾರೆ. ಪೊಷಕರೆ ಬಂದು ಬಕೇಟ್, ಕೊಡಪಾನಗಳಲ್ಲಿ ಹತ್ತಿರದ ಮನೆಗಳಿಂದ ಕುಡಿಯಲು ನೀರು ತರಬೇಕು. ಸಂಬಂಧಪಟ್ಟ ಆಧಿಕಾರಿಗಳು, ಮೆಲ್ವಿಚಾರಕರು ಭೇಟಿ ನೀಡಿ ಗಮನ ಹರಿಸಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಾರ್ವಜನಿಕರ ಅಗ್ರಹವಾಗಿದೆ.









