


ಧರ್ಮಸ್ಥಳ :ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಜಾತ್ರಾ ಮಹೋತ್ಸವದ ಸಂದರ್ಭ ಸಾಂಸ್ಕೃತಿಕ ವೇದಿಕೆಯಲ್ಲಿ ಮಾ.27 ರಂದು ಸಂಗೀತ ಸಾಧಕ ಅಜಿತ್ ಪೂಜಾರಿ ಕನ್ಯಾಡಿ ಇವರ ನಿರ್ದೇಶನ, ಸಾಹಿತ್ಯ, ಗಾಯನದಲ್ಲಿ ಮೂಡಿ ಬಂದ ಆಲ್ಬಮ್ ಸಾಂಗ್ ದಕ್ಷಿಣ ಅಯೋದ್ಯೆ 2 ಕನ್ನಡ ಭಕ್ತಿಗೀತೆಯನ್ನು ಶ್ರೀ ರಾಮ ಕ್ಷೇತ್ರದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ಅಜಿತ್ ಪೂಜಾರಿ ಮತ್ತು ಜೀವಿತಾ ಪಜಿರಡ್ಕ ಗಾಯಕರಾಗಿದ್ದಾರೆ. ನವೀನ್ ಸುವರ್ಣ ಕನ್ಯಾಡಿ, ಸತ್ಯನಾರಾಯಣ ಗುಡಿಗಾರ ನೀರಚಿಲುಮೆ, ರಾಮಚಂದ್ರ ಗೌಡ ಹುಂಕ್ರೋಟ್ಟು, ಸುನಿಲ್ ಕನ್ಯಾಡಿ, ಚೇತನ್ ಪಿಲಿಪಂಜರ,ಸಹನ್ ಎಂ. ಎಸ್. ಸಹಕರಿಸಿದರು.