





ಬೆಳ್ತಂಗಡಿ : ಬೆಳ್ತಂಗಡಿ ನೂತನ ತಹಶೀಲ್ದಾರ್ ಆಗಿ ಸುರೇಶ್ ಕುಮಾರ್ ಟಿ.ಎಸ್ ನೇಮಕಗೊಂಡಿದ್ದಾರೆ.


ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ ವರ್ಗಾವಣೆಯಾದ ಬಳಿಕ ಖಾಲಿ ಇದ್ದ ಬೆಳ್ತಂಗಡಿ ತಹಶೀಲ್ದಾರ್ ಹುದ್ದೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ತಹಶೀಲ್ದಾರ್ ಆಗಿದ್ದ ಸುರೇಶ್ ಕುಮಾರ್.ಟಿ.ಎಸ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್.ಸುಶೀಲ ಅವರು ಆದೇಶವನ್ನು ಹೊರಡಿಸಿದೆ.








