ತಾಲೂಕು ಮಟ್ಟದ ಭಜನಾ ಸ್ಪರ್ಧೆ: ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪ್ರಥಮ, ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ದ್ವಿತೀಯ

0

ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ವೇಣೂರು ಪ್ರಖಂಡ ಮತ್ತು ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ನೇತೃತ್ವದಲ್ಲಿ ತಾಲೂಕಿನ ಭಜನಾ ಮಂಡಳಿಗಳಿಗೆ ಆಯೋಜಿಸಿದ ಭಜನಾ ಸ್ಪರ್ಧೆಗಳ ಸಮಾರೋಪ ಸಮಾರಂಭವು ಮಾ .1 ರಂದು ಸಂಜೆ ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಜನಾ ಮಂಡಳಿ ಪ್ರಥಮ ಸ್ಥಾನಿಯಾಗಿ ರೂ 5 ಲಕ್ಷದ ಬಹುಮಾನ , ದ್ವಿತೀಯ ಕಲ್ಮಂಜ ಗ್ರಾಮದ ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ರೂ.2.5 ಲಕ್ಷ ಪಡೆದುಕೊಂಡಿದೆ. ಅದಲ್ಲದೇ ಗರಿಷ್ಠ ಅಂಕಗಳ ಆಧಾರದಲ್ಲಿ ಆಯ್ಕೆಯಾದ 5 ಭಜನಾ ಮಂಡಳಿಗಳಾದ ಪಂಚಶ್ರೀ ಭಜನಾ ಮಂಡಳಿ ಮಿತ್ತಬಾಗಿಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮುಂಡಾಜೆ, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ ಹೊಸಂಗಡಿ, ಚಾಮುಂಡೇಶ್ವರಿ ಭಜನಾ ಮಂಡಳಿ ಮುಳಿಕ್ಕಾರ್ ಧರ್ಮಸ್ಥಳ, ನಿತ್ಯ ನೂತನ ಭಜನಾ ಮಂಡಳಿ ಜೋಡುಸ್ಥಾನ ಧರ್ಮಸ್ಥಳ ಸೇರಿದಂತೆ ತಲಾ ಒಂದು ಲಕ್ಷ ಬಹುಮಾನ ಪಡೆದುಕೊಂಡಿವೆ.

ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜರು ಬಹುಮಾನವನ್ನು ವಿತರಿಸಿದರು.

ತೀರ್ಪುಗಾರರಾಗಿ ರಮೇಶ್ ಕಲ್ಮಾಡಿ ಉಡುಪಿ, ರಾಜೇಶ್ ಪಡಿಯಾರ್ ಮೈಸೂರು, ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ, ಸಂಯೋಜಕರಾಗಿ ಮಂಜುನಾಥ ಶೆಟ್ಟಿ ಕಲ್ಮಂಜ , ನವೀನ್ ನೆರಿಯ ಹಾಗೂ ತಾಲೂಕಿನ ಭಜನಾ ಮಂಡಳಿಗಳ ಪದಾಧಿಕಾರಿಗಳು ಸಹಕರಿಸಿದರು.

ತಾಲೂಕಿನ 21 ಭಜನಾ ಮಂಡಳಿಗಳ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 63 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here