ತಣ್ಣೀರುಪಂತ: ತಣ್ಣೀರುಪಂತ ಶ್ರೀ ಮಹಾಮ್ಮಾಯಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಮಹೋತ್ಸವವು ಫೆ. 22ರಿಂದ ಪ್ರಾರಂಭಗೊಂಡು ಫೆ.24 ರವರೆಗೆ ಮಡಂತ್ಯಾರು ವೇದಮೂರ್ತಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಇದರ ಮೊದಲ ದಿನವಾದ ಫೆ.22ರಂದು ಕಲ್ಲೇರಿಯಿಂದ ಕ್ಷೇತ್ರದವರೆಗೆ ಹಸಿರು ಹೊರೆಕಾಣಿಕೆ ವಿಜೃಂಭಣೆಯಿಂದ ನಡೆಯಿತು. ಹತ್ತಾರು ವಾಹನಗಳಲ್ಲಿ ಹೊರೆಕಾಣಿಕೆಯನ್ನು ಮೆರೆವಣಿಗೆಯ ಮೂಲಕ ದೇವಾಲಯಕ್ಕೆ ತಲುಪಿಸಲಾಯಿತು.
ಭಜನಾ ತಂಡ, ಬ್ಯಾಂಡ್ ವಾದ್ಯ, ಕಳಶ ಹೊತ್ತ ಮಹಿಳೆಯರ ಸಾಥ್
ಕಲ್ಲೇರಿಯ ಮುಖ್ಯರಸ್ತೆಯ ಬಳಿಯ ವಿಶೇಷ ದ್ವಾರದ ಬಳಿ ಹೊರೆಕಾಣಿಕೆ ಉದ್ಯಮಿ ಬೆಳಿಯೂರು ಗುತ್ತು ಧನ್ಯಕುಮಾರ್ ರೈ ಉದ್ಘಾಟಿಸಿದ್ರು. ಮೆರವಣಿಗೆಯಲ್ಲಿ ಸ್ಥಳೀಯ ಮಕ್ಕಳ ಭಜನಾ ತಂಡ, ಕಳಶ ಹೊತ್ತ ಮಹಿಳೆಯರ ಸರತಿ ಸಾಲುಗಳ ಜೊತೆ ಹಲವಾರು ವಾಹನಗಳಲ್ಲಿ ವಿವಿಧ ತರಕಾರಿ, ಧಾನ್ಯ, ಅಡಿಕೆ, ತೆಂಗಿನಕಾಯಿ, ಬಾಳೆಕಾಯಿ, ಬಾಳೆ ಹಣ್ಣು ಹೀಗೆ ರೈತರು ತಾವು ಬೆಳೆದ ಬೆಳೆಗಳನ್ನು ಕ್ಷೇತ್ರಕ್ಕೆ ಅರ್ಪಿಸಿದರು.
ಮಹಾಮ್ಮಾಯಿ ದೇವಸ್ಥಾನದ ಕಾರ್ಯಾಲಯ, ಉಗ್ರಾಣ ಉದ್ಘಾಟನೆ
ಮಹಮ್ಮಾಯಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಕಾರ್ಯಾಲಯವನ್ನು ಸಹಕಾರಿ ಸಂಘ ಮಂಗಳೂರು ಇದರ ಜಿಲ್ಲಾ ನಿರ್ದೇಶಕರಾಗಿರುವ ನಿರಂಜನ್ ಕುಮಾರ್ ಬಾವಂತಬೆಟ್ಟು ಉದ್ಘಾಟಿಸಿದ್ರು. ಹೊರೆಕಾಣಿಕೆಯನ್ನು ಇಡಲು ನಿರ್ಮಿಸಲಾಗಿರುವ ಉಗ್ರಾಣವನ್ನು ಮಾರುತಿಪುರ ಶಿವಶಂಕರ್ ನಾಯಕ್ ಉದ್ಘಾಟಿಸಿದರು.
ನಾಗ ಪ್ರತಿಷ್ಠೆ, ನೆಲ್ಲಿ-ಅಶ್ವಥ ಮರಕ್ಕೆ ವಿಶೇಷ ಉಪನಯನ,ವಿವಾಹ ಸಂಸ್ಕಾರ
ಕ್ಷೇತ್ರದಲ್ಲಿ ತೋರಣ ಮುಹೂರ್ತ ನಡೆದು, ನಂತರ ನಾಗ ಪ್ರತಿಷ್ಠೆಯ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇದಾದ ಬಳಿಕ ಕ್ಷೇತ್ರದ ವಿಶೇಷ ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ವೃಕ್ಷ ಉಪನಯನ ಮತ್ತು ಅಶ್ವತ್ಥ ಮತ್ತು ನೆಲ್ಲಿ ವೃಕ್ಷಕ್ಕೆ ವಿವಾಹ ಸಂಸ್ಕಾರ ನಡೆಯಿತು.ಅನ್ನಧಾನ ಸೇವಾಕರ್ತರ ಉಪಸ್ಥಿತಿಯಲ್ಲಿ ಪಲ್ಲಪೂಜೆ ನೆರವೇರಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕ್ಕಾಗಿ ಆಗಮಿಸಿದ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ, ನಮ್ಮ ಧರ್ಮದ ಸೊಗಡು,ಆಚಾರ ವಿಚಾರಗಳು ಮತ್ತು ನಾವೆಷ್ಟು ಶ್ರದ್ಧಾ ಭಕ್ತಿಯಿಂದ ನಮ್ಮ ಸಂಪ್ರದಾಯಗಳನ್ನು ಆಚರಿಸಬೇಕೆಂದು ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಪ್ರತಿಷ್ಠಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಧರ್ಮಣ ನಾಯ್ಕ ಉದ್ಘಾಟಿಸಿದರು. ಅದ್ಯಕ್ಷತೆಯನ್ನು ಎಸ್ ಕೆ ಡಿ ಆರ್ ಡಿ ಪಿಯ ಪ್ರಾದೇಶಿಕ ನಿರ್ದೇಶಕರು ಜಯರಾಮ ನೆಲ್ಲಿತ್ತಾಯರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ತಣ್ಣೀರುಪಂತ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭರತ್ ಶೆಟ್ಟಿ, ಬಳ್ಳಮಂಜ ಆನುವಂಶಿಕ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಗುರುವಾಯನಕೆರೆ ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಯಶವಂತ ಎಸ್, ನ್ಯಾಯವಾದಿ ಸಂತೋಷ್ ಕುಮಾರ್, ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ ನಾಯ್ಕ, ಕೆದಿಲ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಉಷಾಚಂದ್ರ ಮುಳಿಯ, ತಣ್ಣೀರುಪಂತ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ವೈ.ಎನ್, ಮಂಗಳೂರು ಹಾಪ್ ಕಾಮ್ಸ್ ನಿರ್ದೇಶಕ ಬಾಲಕೃಷ್ಣ ಪಕಳ, ತಣ್ಣೀರುಪಂತ ಕೃಷಿ ಪತ್ತಿನ ಸ.ಸಂಘದ ನಿರ್ದೇಶಕಿ ಶ್ರೀಮತಿ ಜಯಂತಿ ಪಾಲೇದು, ಲಕ್ಷ್ಮಣ ನಾಯ್ಕ ಹಲೇಜಿ,ಪ್ರತಿಷ್ಠಾ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ, ಉಪಾಧ್ಯಕ್ಷ ಮಹೇಶ್ ಜೇಂಕ್ಯಾರ್, ದುಗ್ಗಪ್ಪಗೌಡ ಪೊಸಂದೋಡಿ, ಪಿ ಸಿ ನಾಯ್ಕ ತುರ್ಕಳಿಕೆ, ಚೇತನ್ ಸುವರ್ಣ ಅಳಕ್ಕೆ, ಸುರೇಶ್ ಎಚ್ ಎಲ್ ಹಲೇಜಿ, ಪೂವಪ್ಪ ನಾಯ್ಕ ಮೊರಂಪ್ಲೋಡಿ, ನತೀಶ್ ನಾಯ್ಕ ಬೊಳ್ನಡ್ಕ, ಚಿದಾನಂದ ಆರ್ಜವಂ ಉಪಸ್ಥಿತರಿದ್ದರು.