ಧರ್ಮಸ್ಥಳ: ಬಿ. ಎಸ್.ಎನ್.ಎಲ್ ಬ್ಯಾಟರಿ ಕಳ್ಳತನ ಪ್ರಕರಣ; ಧರ್ಮಸ್ಥಳ ಪೊಲೀಸರಿಂದ ಆರೋಪಿಯ ಬಂಧನ

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿರುವ ಬಿ. ಎಸ್.ಎನ್.ಎಲ್ ಕಟ್ಟಡದಲ್ಲಿ ಇತ್ತೀಚೆಗೆ ನಡೆದ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೇರಳದಲ್ಲಿ ಪತ್ತೆ ಹಚ್ಚಿ , ರೂ. 80 ಸಾವಿರ ಮೌಲ್ಯದ ಬ್ಯಾಟರಿ ವಶಕ್ಕೆ ಪಡೆಯುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ತಾಲೂಕಿನ ಎಯುಕೊನ್ ಗ್ರಾಮದ ಜೆನಿ ಭವನ್ ನಿವಾಸಿ ಮಾದ್ರೂ ಪಣಿಕ್ಕರ್ ಅವರ ಪುತ್ರ ಇಟ್ಟೆಪಣಿಕ್ಕರ್ (57ವ) ಬಂಧಿತ ಆರೋಪಿ.

ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿರುವ ಬಿ.ಎಸ್.ಎನ್.ಎಲ್ ಸಂಸ್ಥೆಯವರ ಬಾಬ್ತು ಉಪಯೋಗಕ್ಕೆ ಬಾರದೇ ಇದ್ದು ಬ್ಯಾಟರಿಗಳನ್ನು ಬಿ.ಎಸ್‌.ಎನ್ ಎಲ್ ಕಟ್ಟಡದಲ್ಲಿ ಪ್ರತ್ಯೇಕವಾಗಿ ತೆಗೆದಿರಿಸಿದ್ದನ್ನು ಕಳ್ಳರು ಈ ಕಟ್ಟಡದ ಬಾಗಿಲು ಬೀಗವನ್ನು ಮುರಿದು ಸುಮಾರು 80,000/- ಮೌಲ್ಯದ 15 ಎಕ್ಸೆಡ್ 1000 ಎ.ಹೆಚ್ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಬಿ.ಎಸ್.ಎನ್ ಎಲ್ ಸಂಸ್ಥೆಯ ಕಿರಿಯ ದೂರ ಸಂಪರ್ಕ ಅಧಿಕಾರಿಯಾದ ಶ್ರೀಮತಿ ಆಶಾ ಡಿ. ಯವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಧರ್ಮಸ್ಥಳ ಪೊಲೀಸ್‌ ಠಾಣಾ ಪಿ.ಎಸ್.ಐ. ಅನೀಲಕುಮಾರ ಡಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಶ್, ಪ್ರಶಾಂತ, ಸತೀಶ ನಾಯ್ಕ ಜಿ ಲಾರೆನ್ಸ್ ಪಿ.ಆರ್, ಮಹಮ್ಮದ್ ಅಸ್ಲಾಂ ,ಮಲ್ಲಿಕಾರ್ಜುನ, ಹರೀಶ್ ಕೆ ಎಂ ಮತ್ತು ಚಾಲಕರಾದ ಲೊಕೇಶ್ ರವರುಗಳು ಸಹಾಯದಿಂದ ಶೀಘ್ರ ಕಾರ್ಯಾಚರಣೆ ನಡೆಸಿದ್ದಾರೆ.

p>

LEAVE A REPLY

Please enter your comment!
Please enter your name here