ದ.ಕ. ನೂತನ ಎಸ್ಪಿ ಯಾಗಿ ವಿಕ್ರಮ್ ಅಮ್ಟೆ ನೇಮಕ

0

ಮಂಗಳೂರು: ದಕ್ಷಿಣ ಕನ್ನಡ ಎಸ್ಪಿ ಸೇರಿದಂತೆ ರಾಜ್ಯದಲ್ಲಿ ನಾಲ್ವರು ಎಸ್ಪಿ ದರ್ಜೆಯ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನಾವಣೆ ಭಗವಾನ್ ಅವರನ್ನು ಗುಪ್ತಚಾರ ವಿಭಾಗದ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು, ಖಾಲಿಯಾದ ಇಲ್ಲಿನ ಹುದ್ದೆಗೆ ಗುಪ್ತಚಾರ ವಿಭಾಗದಲ್ಲಿದ್ದ ವಿಕ್ರಮ್ ಅಮ್ಟೆ ರವರನ್ನು ನಿಯೋಜನೆ ಮಾಡಲಾಗಿದೆ.

2015ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಋಷಿಕೇಶ್ ಸೋನಾವಣೆ ಒಂದು ವರ್ಷದ ಹಿಂದೆ ಮಂಗಳೂರಿಗೆ ಬಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಉತ್ತಮ ಹೆಸರು ಮಾಡಿದ್ದಾರೆ.

LEAVE A REPLY

Please enter your comment!
Please enter your name here