


ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಬೈಲ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಕೆಪಿಟಿ ಮೈದಾನದಲ್ಲಿ ಮೊಬೈಲ್ ಶಾಪ್ ಮಾಲಕರಿಗಾಗಿ ಜ. 29 ರಂದು ಕ್ರೀಡಾ ಕೂಟ ನಡೆಯಿತು.
ದ. ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ 250 ಕ್ಕಿಂತಲೂ ಹೆಚ್ಚಿನ ಮೊಬೈಲ್ ಶಾಪ್ ಮಾಲಕರು ವಿವಿಧ ಆಟೋಟ ಸ್ಪರ್ಧೆಯಲ್ಲಿ ಬಹಳ ಉತ್ಸುಕತೆಯಿಂದ ಭಾಗವಹಿಸಿದರು.
ಬೆಳ್ತಂಗಡಿ ಮೊಬೈಲ್ ಅಸೋಸಿಯೇಷನ್ ಐದು ಪ್ರಥಮ ಮತ್ತು ಮೂರು ದ್ವಿತೀಯ ಬಹುಮಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಹರ್ಷದ್ ಕ್ರಿಕೆಟ್, ಅಜರ್ ವಾಲಿಬಾಲ್, ಹರೀಶ್ ಹಗ್ಗಜಗ್ಗಾಟ ತಂಡವನ್ನು ಮುನ್ನಡೆಸಿದರು. ಅರಿಯಂತ್ ಜೈನ್, ಚಿದಾನಂದ ಶೆಟ್ಟಿ, ಉಮೇಶ್ ಕುಮಾರ್, ಶರೀಫ್ ಉಜಿರೆ ಕ್ರೀಡಾ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಶರೀಫ್ ಜಿ. ಕೆರೆ ರಿಲೇ, ಗುಂಡೆಸತ. ನೂರು ಮತ್ತು ಇನ್ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಕ್ರೀಡಾಕೂಟದಲ್ಲಿ ಮಿಂಚಿದರು.