


ವೇಣೂರು: ಇಲ್ಲಿಯ ಬಾಹುಬಲಿ ಬೆಟ್ಟದ ರಥೋತ್ಸವದ ಹಿನ್ನೆಲೆಯಲ್ಲಿ ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ, ಬಾಹುಬಲಿ ಯುವಜನ ಸಂಘ, ಭಾರತೀಯ ಜೈನ್ ಮಿಲನ್, ಬ್ರಾಹ್ಮಿ ಮಹಿಳಾ ಸಂಘ ಹಾಗೂ ಇಲ್ಲಿಯ ಶ್ರಾವಕ ಶ್ರಾವಕಿಯವರು ಸೇರಿ ಬಾಹುಬಲಿ ಮೂರ್ತಿಯನ್ನು ಸ್ವಚ್ಛಗೊಳಿಸಿದರು. ಮೂರ್ತಿಯ ಸ್ವಚ್ಛತೆಗೆ ಅಟ್ಟಳಿಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವ್ಯವಸ್ಥೆಗೊಳಿಸಿದ್ದರು.