
ಬೆಳ್ತಂಗಡಿ: ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿ, ಪೇಟೆಯ ಹೃದಯಭಾಗದಲ್ಲಿರುವ ಸಾಂತೋಮ್ ಟವರ್ ವಾಣಿಜ್ಯ ಸಂಕೀರ್ಣದಲ್ಲಿ ಬೇಬಿ ಕ್ಲೌಡ್ ಕೆಜಿ ಮಾರ್ಟ್ ಜು.24ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.
ಬೆಳ್ತಂಗಡಿಯ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಬಟ್ಟೆ ಖರೀದಿಸಲು ಆಕರ್ಷಕ ಅವಕಾಶ ಇದಾಗಿದ್ದು, ಹುಟ್ಟಿದ ಮಗುವಿನಿಂದ ಹಿಡಿದು ಹತ್ತು, ಹದಿನಾಲ್ಕು ವರ್ಷದ ಮಕ್ಕಳವರೆಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಕೆಜಿ ಲೆಕ್ಕದಲ್ಲಿ ದೊರೆಯಲಿದೆ.
ಒಂದು ಗ್ರಾಮ್ ಬಟ್ಟೆಗೆ ಒಂದು ರೂಪಾಯಿ, ಒಂದು ಕೆಜಿಗೆ ರೂ. 999, ಒಂದು ಪೀಸ್ ಬಟ್ಟೆಗೆ ರೂ.19 ರಿಂದ ಪ್ರಾರಂಭವಾಗಿದ್ದು ರೂ.499 ಕ್ಕೆ ಬ್ರಾಂಡೆಡ್ ಬಟ್ಟೆಗಳು ದೊರೆಯುತ್ತದೆ ಎಂದು ಇಮೇಜ್ ಗ್ರೂಪ್ಸ್ ಮಾಲಕ ಅಝರ್ ನಾವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.