ಬೆಳ್ತಂಗಡಿ: ಕಳೆದ 7 ವರ್ಷಗಳ ಹಿಂದೆ ಬೆಳ್ತಂಗಡಿಯ ಸಂತೆಕಟ್ಟೆ ಐ.ಜೆ ಕಾಂಪ್ಲೆಕ್ಸ್ ನಲ್ಲಿ ಪುಟ್ಟದಾಗಿ ಮಾತೃಶ್ರೀ ಸಿಲ್ಕ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಪ್ರಾಮಾಣಿಕ ಹಾಗೂ ನಗು ಮೊಗದ ಸೇವೆಯಿಂದ ವಸ್ತ್ರ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಸಹಕಾರ ನೀಡುತ್ತಾ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿ ಸುಮಾರು 4000 ಚದರ ಅಡಿಯಷ್ಟು ದೊಡ್ಡದಾದ ಮಳಿಗೆಯನ್ನು ತಾಲೂಕಿನ ಜನತೆಗೆ ಪರಿಚಯಿಸಿದ್ದು ಈ ಬಾರಿ ಹೊಚ್ಚ ಹೊಸ ವಸ್ತ್ರಗಳ ಬೃಹತ್ ಸಂಗ್ರಹವಿದೆ ಎಂದು ಸಂಸ್ಥೆಯ ಪಾಲುದಾರರಾದ ಮೋಹನ್ ಸುವರ್ಣ, ಗೀರೀಶ್ ಸುವರ್ಣ,ಸುರೇಶ್ ದೇವಾಡಿಗ ತಿಳಿಸಿದ್ದಾರೆ.
ಬ್ರಹ್ಮಕಲಶ, ನಾಗಮಂಡಲ, ನೇಮೋತ್ಸವ, ಪೂಜೆ, ಹವನ, ಉಪನಯನ,ಗೃಹಪ್ರವೇಶ, ಭಜನೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾದ ವಿವಿಧ ಮಾದರಿಯ ಪಂಚೆ, ಶಾಲು, ಶರ್ಟ್ ವಿತದರದಲ್ಲಿ ಲಭ್ಯವಿದೆ.
ಮದುವೆ ಜವಳಿಗಳು ಮತ್ತು ವಿಶೇಷವಾಗಿ ಕಾರ್ಯಕ್ರಮಗಳಿಗಾಗಿ ಆಯ್ದ ಡ್ರೆಸ್ ಗಳ, ಲೇಡೀಸ್, ಜಂಟ್ಸ್ ಹಾಗೂ ಮಕ್ಕಳ ವಸ್ತ್ರಗಳ ಹೊಚ್ಚ ಹೊಸ ಬೃಹತ್ ಸಂಗ್ರವಿದ್ದು ಬೆಳ್ತಂಗಡಿಯ ಗ್ರಾಹಕರು ಖರೀದಿಗೆ ದೂರದೂರಿಗೆ ಹೋಗುವ ಮುನ್ನ ಮಾತೃಶ್ರೀ ವಸ್ತ್ರ ಮಳಿಗೆಗೆ ಭೇಟಿ ನೀಡಿ ಗುಣಮಟ್ಟ ಹಾಗೂ ದರವನ್ನು ಪರೀಕ್ಷಿಸಿ ಎಂದು ಸಂಸ್ಥೆಯ ಮಾಲಕರು ಹೇಳಿದರು.