ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಉಜಿರೆ ತಂಡ ಪ್ರಥಮ ಸ್ಥಾನ

0

**ಉಜಿರೆ, ಪರಮಪೂಜ್ಯ ಮುನಿಶ್ರೀ 108 ಅಮೋಘ ಕೀರ್ತಿ ಮಹಾರಾಜರು ಮತ್ತು ಪರಮಪೂಜ್ಯ ಮುನಿಶ್ರೀ 108 ಅಮರ ಕೀರ್ತಿ ಮಹಾರಾಜರ ಉಪಸ್ಥಿತಿಯಲ್ಲಿ ಭಾರತೀಯ ಜೈನ್ ಮಿಲನ್ ಪರಮ ಸಂರಕ್ಷಕರಾದ ಶ್ರೀಮತಿ ಹೇಮಾವತಿ ಮತ್ತು ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬವರ್ಗದವರ ಮಾರ್ಗದರ್ಶನದೊಂದಿಗೆ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಅವರ ಪರಿಕಲ್ಪನೆಯ ಭಾರತೀಯ ಜೈನ್ ಮಿಲನ್ ವಲಯ- 8ರ ಸೀಸನ್ -6 ಉಲ್ಲಾಸ -ಉತ್ಸಾಹ- ಉತ್ಸವ-ದೊಂದಿಗೆ-ದೇವ- ಶಾಸ್ತ್ರ- ಗುರು-ಪರಿಕಲ್ಪನೆಯೊಂದಿಗೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ 2 ದಿನಗಳ ಕಾಲ ಸೆಮಿಫೈನಲ್ಸ್ ಮತ್ತು ಫಿನಾಲೆ ಜರಗಿತು.

ಕಾರ್ಯಕ್ರಮದಲ್ಲಿ ವೀರ್ ಸುರೇಂದ್ರ ಕುಮಾರ್ ರಾಷ್ಟ್ರೀಯ ಕಾರ್ಯಾಧ್ಯಕ್ಷರು ಭಾರತೀಯ ಜೈನ್ ಮಿಲನ್, ನವದೆಹಲಿ ಉದ್ಘಾಟಿಸಿದ್ದರು. ಮುನಿಶ್ರೀಗಳಿಂದ ಆಶೀರ್ವಚನ , ಡಾ. ವೀರೇಂದ್ರ ಹೆಗ್ಗಡೆಯವರಿಂದ ಮಾರ್ಗದರ್ಶನದ ಮಾತು ಹಾಗೂ ಅತಿಥಿಗಳಿಂದ ಶುಭ ಹಾರೈಸಿದರು. 50 ತಂಡಗಳು ಭಾಗವಹಿಸಿದ ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ -ಭ್ರಾಮರಿ ಭಜನಾ ತಂಡ ಉಜಿರೆ ಪ್ರಥಮ ಸ್ಥಾನದೊಂದಿಗೆ ನಗದು ಬಹುಮಾನ,ಟ್ರೋಫಿ ತನ್ನದಾಗಿಸಿಕೊಂಡಿತು.(ರಾಜರತ್ನ, ಬ್ರಾಹ್ಮಿ,ಶ್ರುತ,ಚಾರಿತ್ರ, ವರ್ಷಿತ)ಹಿರಿಯರ ವಿಭಾಗದಲ್ಲಿ ವಿಧೂಶ ಭಜನಾ ತಂಡ ಉಜಿರೆ ಪ್ರಥಮ ಸ್ಥಾನದೊಂದಿಗೆ ನಗದು ಬಹುಮಾನ, ಟ್ರೋಫಿ ಪಡೆಯಿತು. (ರುಚಿರಾ.ಬಿ, ಪ್ರತಿಷ್ಠಾ, ಸ್ತುತಿ .ಎಸ್ .ಕೊಂಬ, ಅನನ್ಯ ,ಚೈತ್ರಾ, ಪ್ರಶ್ಮ, ಸಾತ್ವಿಕ ಜೈನ್, ಅನನ್ಯ, ರಂಜಿನಿ)ಈ ಸಂದರ್ಭದಲ್ಲಿ ಉಜಿರೆ ತಂಡದ ಕುಣಿತ ಭಜನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಕುಣಿತ ಭಜನೆ ತರಬೇತಿ ನೀಡಿದ ವಿನ್ಯಾಸ್, ಮಿಥುನ್ ಡಿ.ಪಿ. ಇವರನ್ನು ಅಭಿನಂದಿಸಿದರು.ವಿಜೇತ ತಂಡವನ್ನು ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರುಯವರು, ಡಿ. ಹರ್ಷೇಂದ್ರ ಕುಮಾರ್, ಶ್ರೀಮತಿ ಸುಪ್ರಿಯಹರ್ಷೇಂದ್ರ ಕುಮಾರ್, ಭಜನಾ ತಂಡದ ಮಾರ್ಗದರ್ಶಕರಾದ ಶ್ರೀಮತಿ ಸೋನಿಯಾ ಯಶೋವರ್ಮ, ಶ್ರೀ ಪೂರನ್ ವರ್ಮ, ಕಾರ್ಯದರ್ಶಿಗಳಾದ ಡಾ. ಸತೀಶ್ ಚಂದ್ರ .ಎಸ್, ಇವರು ಅಭಿನಂದಿಸಿದರು.

ಭಜನಾ ತಂಡದ ತರಬೇತುದಾರರಾದ ಭಗೀರಥ, ಕಮಲಾಕ್ಷ ಆಚಾರ್, ಸಂಘಟಕರಾದ ತೃಪ್ತ ಕುಮಾರ್ ಜೈನ್, ಬಿ ಸೋಮಶೇಖರ್ ಶೆಟ್ಟಿ, ಯಶವಂತ, ರಾಹುಲ್ ಜೈನ್, ಶ್ರೀಮತಿ ಶಶಿಪ್ರಭ, ಶ್ರೀಮತಿ ಅಕ್ಷತಾ, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here