ನಡ: ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನರೇಂದ್ರ ನಮನ

0

ಬೆಳ್ತಂಗಡಿ : ಜೇಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜು ನಡ ಸಹಯೋಗದಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನರೇಂದ್ರ ನಮನ ಕಾರ್ಯಕ್ರಮ ಜ.12 ರಂದು‌ ನಡ ಸ.ಪ.ಪೂ.ಕಾಲೇಜಿನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಶಂಕರ್ ರಾವ್ ವಹಿಸಿದರು. ಈ ಸಂದರ್ಭದಲ್ಲಿ ನಡ.ಸ.ಪ.ಪೂ ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್., ಉಪನ್ಯಾಸಕ ಮೋಹನ್ ಗೌಡ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ನಿಕಟಪೂರ್ವ ಅಧ್ಯಕ್ಷ ಪ್ರಸಾದ್, ಪೂರ್ವಾಧ್ಯಕ್ಷ ಚಿದನಾಂದ ಇಡ್ಯಾ, ಕಾರ್ಯಕ್ರಮ ಸಂಯೋಜಕಿ ಆಶಾಲತಾ ಉಪಸ್ಥಿತರಿದ್ದರು. ದಿಕ್ಸೂಚಿ ಭಾಷಣವನ್ನು ಪ್ರಥ್ವಿಶ್ ಧರ್ಮಸ್ಥಳ ನೀಡಿದರು.

ವೇದಿಕೆಯಲ್ಲಿ ಆದರ್ಶ ಯುವ ನಾಯಕ ಪ್ರಶಸ್ತಿಯನ್ನು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡರಿಗೆ ನೀಡಿ ಸನ್ಮಾನಿಸಲಾಯಿತು. ಜೇಸಿ ಚಂದ್ರಹಾಸ ಸ್ವಾಗತಿಸಿ, ಕಾರ್ಯದರ್ಶಿ ಸುಧೀರ್ ಕೆ.ಎನ್. ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here