ಡಿ.31- ಜ.1 :ಮುಗೇರಡ್ಕ ಶ್ರೀ ದುರ್ಗಾನುಗ್ರಹ ಭಜನಾ ಮಂದಿರದ ಪ್ರವೇಶೋತ್ಸವ

0

ಮೊಗ್ರು :ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಇದರ ನವೀಕೃತ ಮಂದಿರದ ಪ್ರವೇಶೋತ್ಸವವು ಡಿ.31 ರಿಂದ ಜ.01 ಆದಿತ್ಯವಾರದವರೆಗೆ ನಡೆಯಲಿದೆ.

ಮಂದಿರದ ಪ್ರವೇಶೋತ್ಸವವು ಶ್ರೀ ಅನಂತಕೃಷ್ಣ ಉಡುಪ ಮುದ್ಯ ಇವರ ಪೌರೋಹಿತ್ಯದಲ್ಲಿ ನೆರವೇರಲಿದೆ. ಡಿ. 31 ರಂದು ಮೊಗ್ರು,ಬಂದಾರು,ಬಜತ್ತೂರು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ , ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ನಡೆಯಲಿದ್ದು, ನಂತರ ಅನ್ನಸಂತರ್ಪಣೆ ನಡೆಯಲಿದೆ. ಜ.01-01-2023 ನೇ ಆದಿತ್ಯವಾರದಂದು ಪೂರ್ವಾಹ್ನ ಗಣಹೋಮ, ಚಂಡಿಕಾ ಹೋಮ ನಡೆದ ಬಳಿಕ ಶ್ರೀ ದುರ್ಗಾನುಗ್ರಹ ನವೀಕೃತ ಭಜನಾ ಮಂದಿರದ ಪ್ರವೇಶೋತ್ಸವ ನಡೆಯಲಿದೆ. ಈ ಸಂದರ್ಭ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನಿಡಲಿದ್ದಾರೆ. ಬಳಿಕ ಭಜನಾ ಸಂಕೀರ್ತನೆ , ವಿವಿಧ ಧಾರ್ಮಿಕ ಕಾರ್ಯಕ್ರಮ,ಸಂಜೆ 4.00 ರಿಂದ ಸ್ಥಳಿಯ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 7.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಸಭಾಧ್ಯಕ್ಷರಾಗಿ ಶ್ರೀ ರಾಮಣ್ಣ ಗೌಡ ದೇವಸ್ಯ ಆಡಳಿತ ಮೊಕ್ತೇಶರರು ಮುಗೇರಡ್ಕ, ಉದ್ಘಾಟಕರಾಗಿ ಶ್ರೀ ಹರೀಶ್ ಪೂಂಜ ಶಾಸಕರು ಬೆಳ್ತಂಗಡಿ, ಧಾರ್ಮಿಕ ಉಪನ್ಯಾಸಕರಾಗಿ ಕು.ಶ್ರೀದೇವಿ.ಕೆ ಯುವವಾಗ್ಮಿ ಪುತ್ತೂರು,ಮುಖ್ಯ ಅತಿಥಿಗಳಾಗಿ ಶ್ರೀ ಶಶಿಧರ ಬಿ. ಶೆಟ್ಟಿ ನವಶಕ್ತಿ ಗುರುವಾಯನಕೆರೆ,ಶ್ರೀ ‌ಮೋಹನ್ ಕುಮಾರ್ ಲಕ್ಮೀ ಇಂಡಸ್ಟ್ರೀಸ್ ಉಜಿರೆ ಹಾಗೂ ಇನ್ನೂ ಹಲವಾರು ಗಣ್ಯರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೇರವೆರಲಿದೆ .ರಾತ್ರಿ 9.00 ಗಂಟೆಗೆ ವಿಶೇಷ ಆಕರ್ಷಣೆಯಾಗಿ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು,ಪ್ರವೀಣ್ ಜೈನ್,ಯುವ ಶೆಟ್ಟಿ,ಗಾಯಕಿ ವಿಜಯಶ್ರೀ ಮುಳಿಯ,ನಿರೂಪಕ ದೀಕ್ಷಿತ್ ಕೆ.ಇವರ ಸಮಾಗಮದಲ್ಲಿ ತೆಲಿಕೆದ ತಮ್ಮನ ಕಾಮಿಡಿ ಶೋ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮಂದಿರದ ಪ್ರವೇಶೋತ್ಸವವು ಸಂಪನ್ನಗೊಳ್ಳಲಿದೆ. ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯು ವಿನಂತಿಸಿದೆ.

LEAVE A REPLY

Please enter your comment!
Please enter your name here