ಬೆಳಾಲು ಪ್ರೌಢಶಾಲೆಯಲ್ಲಿ ಕುವೆಂಪು ನೆನಪು

0

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ.ದ ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಭಾಗಿತ್ವದಲ್ಲಿ “ಕುವೆಂಪು ನೆನಪು” ವಿಶ್ವ ಮಾನವ ದಿನಾಚರಣೆ ಡಿ.29 ಜರಗಿತು. ಶಾಲಾ ಮುಖ್ಯೋಪಾಧ್ಯಾ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳೂ ಆದ ರಾಮಕೃಷ್ಣ ಭಟ್ ಚೊಕ್ಕಾಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥರವರು ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಾ, ಮಾನವತೆಯ ಸಾಕಾರಮೂರ್ತಿಯಾಗಿ ಬದುಕಿದ ಕುವೆಂಪುರವರು ನಿಜವಾದ ವಿಶ್ವ ಮಾನವರು. ಅವರ ನಡೆನುಡಿಯಲ್ಲಿ , ಬರಹಗಳಲ್ಲಿ, ಕೃತಿಗಳಲ್ಲಿ ಜೀವಪರ ಕಾಳಜಿ, ಜೀವನ ಮೌಲ್ಯಗಳು, ಪರಿಸರ ಪ್ರೀತಿ ಬಹುವಾಗಿ ಪ್ರತಿಪಾದಿತವಾಗಿದೆ. ತಾನು ಮಾಡುವ ಕೆಲಸವನ್ನೇ ದೇವರೆಂದು ಕರ್ತವ್ಯ ನಿರ್ವಹಿಸಿದವರು. ಅಂತಹ ವ್ಯಕ್ತಿತ್ವದ ನೆನಪು ಎಲ್ಲರ ಜೀವನಾದರ್ಶವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕುವೆಂಪುರವರ ಪರಿಚಯವನ್ನು ವಿದ್ಯಾರ್ಥಿ ಶಾರಿಯಾ ಖಾನಂ ಮಾಡಿ, ವಿಶ್ವ ಮಾನವ ಸಂದೇಶವನ್ನು ಸ್ವಸ್ತಿಕ್ ರವರು ತಿಳಿಸಿದರು. ವಿದ್ಯಾರ್ಥಿಗಳಿಂದ ಕುವೆಂಪು ಗೀತೆಗಳ ಗಾಯನವೂ ನೆರವೇರಿತು. ವೇದಿಕೆಯಲ್ಲಿ ಶಿಕ್ಷಕರಾದ ಕೃಷ್ಣಾನಂದ, ಜಗದೀಶ್ ಮತ್ತು ರವಿಚಂದ್ರ ಜೈನ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕರಾದ ಸುಮನ್ ಯು. ಎಸ್. ಸ್ವಾಗತಿಸಿ , ತೀರ್ಥೇಶ್ ವಂದಿಸಿದರು, ಶ್ರಾವ್ಯ ಎಸ್. ವಿ. ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here