ವೇಣೂರು: ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯ ಸಭಾಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿ ಎಲ್ಲರನ್ನು ಆಶೀರ್ವದಿಸಿದರು.
ವೇದಿಕೆಯಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು, ಶಾಸಕ ಹರೀಶ್ ಪೂಂಜ,ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಹಾಲೀಂಗೇಶ್ವರ ಭಟ್ ಎಂ.ಎಸ್,ಕರಿಮಣೇಲು ಪಾಳೆಂಜ ಮನೆತನದ ಸದಾಮದ ಹೆಗ್ಡೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಕೀರ್ತಿರಾಜ ಅಜ್ರಿ,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಕೆ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ,ಶಾಸಕ ಹರೀಶ್ ಪೂಂಜ, ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ,ವೆಂಕಟರಮಣ ಜೋಯಿಸರು ಮಾಡಾವು,ಶಿಲ್ಪಿಗಳಾದ ಈಶ್ವರ ಚಂದ್ರ ಮುಂಡ್ಕೂರು,ವಸಂತ ಆಚಾರ್ಯ ಬೆಳಾಲು,ಅರುಣ್ ಭಂಡಾರಿ ಬೆಂಗಳೂರು ಇವರನ್ನು ಸನ್ಮಾನಿಸಲಾಯಿತು.
ಶೃತಿ ಶ್ರವಣ್ ಪ್ರಾರ್ಥನೆ ಹಾಡಿದರು, ಕೃಷ್ಣ ಕೆ ಸ್ವಾಗತಿಸಿದರು,ಮಹಾವೀರ್ ಜೈನ್ ನಿರೂಪಿಸಿದರು, ಬಾಲಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು.
ಸಂಜೆ ಗಜಗೌರಿವ್ರತ ಹರಿಕಥೆ ನಡೆಯಿತು.ನಂತರ ಕಲ್ಲಡ್ಕ ವಿಠಲ ನಾಯಕ್ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯುತ್ತಿದೆ.